ಈಶ್ಪರಪ್ಪ ಉಚ್ಛಾಟನೆಯಲ್ಲಿ ನಮ್ಮ ಪಾತ್ರವಿಲ್ಲ: ಯಡಿಯೂರಪ್ಪ

71

ಪ್ರಜಾಸ್ತ್ರ ಸುದ್ದಿ

ಶಿವಮೊಗ್ಗ: ಬಿಜೆಪಿ ಮಾಜಿ ಸಚಿವ, ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಬಂಡಾಯವೆದ್ದ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಇದೀಗ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಯಡಿಯೂರಪ್ಪ, ಈಶ್ವರಪ್ಪ ವಿರುದ್ಧದ ಶಿಸ್ತು ಕ್ರಮದಲ್ಲಿ ನಮ್ಮ ಪಾತ್ರವಿಲ್ಲ ಎಂದಿದ್ದಾರೆ.

ಮಂಗಳವಾರ ಶಿಕಾರಿಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಚ್ಛಾಟನೆಗೂ ಮೊದಲು ಹಲವು ಬಾರಿ ಅವಕಾಶಗಳನ್ನು ನೀಡಲಾಗಿದೆ. ಎಲ್ಲ ರಾಜ್ಯಗಳಲ್ಲಿ ಇರುವಂತೆ ನಮ್ಮಲ್ಲಿಯೂ ಶಿಸ್ತು ಸಮಿತಿ ಇದೆ. ಈಶ್ವರಪ್ಪನವರು ಅಪೇಕ್ಷೆಯಂತೆ ಉಚ್ಛಾಟನೆ ಮಾಡಲಾಗಿದೆ. ಇದರಲ್ಲಿ ನಮ್ಮ ಪಾತ್ರವಿಲ್ಲ ಅಂತಾ ಹೇಳಿದರು.

ಇನ್ನು ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಶ್ರಮ ಪಡುತ್ತಿದ್ದಾರೆ. ಈ ಬಾರಿ 28 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು.




Leave a Reply

Your email address will not be published. Required fields are marked *

error: Content is protected !!