ನೀವು ಭಯೋತ್ಪಾದಕರನ್ನು ಬೆಳಸ್ತಿದ್ದೀರಿ: ಮುತಾಲಿಕ್

127

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಎಂಬುವರ ಮಗಳನ್ನು ಕಾಲೇಜು ಆವರಣದಲ್ಲಿ ಕೊಲೆ ಮಾಡಿದ ಪ್ರಕರಣ ಸಂಬಂಧ, ಶ್ರೀರಾಮ್ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿದ್ದು, ಕೊಲೆ ಅಪರಾಧಿಗೆ ಗಲ್ಲು ಶಿಕ್ಷೆ ಎನ್ನುವುದು ಹಾಸ್ಯಸ್ಪದ. ಅವನು ಜಾಮೀನು ತಗೊಂಡು ಹೊರಗ ಬರ್ತನ. ಅದ್ಕ ಎನ್ ಕೌಂಟರ್ ಮಾಡಬೇಕು. ಅವನ ಮನೆಯಲ್ಲಿ ನೆಲಸಮ ಮಾಡಬೇಕು ಎಂದಿದ್ದಾರೆ.

ಕೊಲೆಯಾದ ಯುವತಿ ನೇಹಾ ಹಿರೇಮಠ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಇದು ನೂರಕ್ಕೆ ನೂರರಷ್ಟು ಲವ್ ಜಿಹಾದ್. ಕಾಂಗ್ರೆಸ್ ಇರುವ ತನಕ ಮುಸ್ಲಿಂ ಕ್ರೌರ್ಯ ಜೀವಂತ. ನೀವು ಭಯೋತ್ಪಾದಕರನ್ನು ಬೆಳಸ್ತಿದ್ದೀರಿ ಅಂತಾ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಕೂಡಲೇ ಅವನ ವಿರುದ್ಧ ಎನ್ ಕೌಂಟರ್ ಆದೇಶ ಹೊರಡಿಸಬೇಕು. ಹೆಣ್ಮಕ್ಕಳ ಬಗ್ಗೆ ಕಾಳಜಿ ಇದ್ದರೆ ಜಮಾತಾದವರು ತಕ್ಷಣ ಆತನ ಕುಟುಂಬಸ್ಥರಿಗೆ ಬಹಿಷ್ಕಾರದ ಪತ್ವಾ ಹೊರಡಿಸಬೇಕು. ಯಾರು ಅವನ ಪರ ವಕೀಲರು ವಾದ ಮಾಡಬಾರದು. ಒಂದು ವೇಳೆ ಮಾಡಿದರೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
Leave a Reply

Your email address will not be published. Required fields are marked *

error: Content is protected !!