ನೇಹಾ ಹತ್ಯೆ ಹಿಂದೆ ಕಾಣದ ಕೈವಾಡದ ಸಂಶಯ: ಆರ್.ಅಶೋಕ್

82

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯ ಹಿಂದೆ ಕಾಣದ ಕೈವಾಡದ ಸಂಶಯ ಮೂಡುತ್ತಿದೆ. ಫಯಾಜ್ ಹಿಂದೆ ಯಾರಿದ್ದಾರೆ? ಪಿಎಫ್ಐ ಕೈವಾಡವಿದೆಯಾ? ಕೊಲೆ ಮಾಡುವ ವೇಳೆ ಡ್ರಗ್ಸ್ ತೆಗೆದುಕೊಂಡಿದ್ದನಾ? ಈ ಎಲ್ಲದರ ತನಿಖೆಯಾಗಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಮಂಗಳವಾರ ನೇಹಾ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವಾನ ಹೇಳಿದರು. ಇದು ಗಂಭೀರ ಪ್ರಕರಣವಾಗಿದೆ. ವಿಧಾನಸಭೆ ಅಧಿವೇಶನದಲ್ಲಿ ಮಾತನಾಡುತ್ತೇನೆ. ಕಾಲೇಜು ಆವರಣದ ಸುರಕ್ಷತೆ ಬಗ್ಗೆ ಸರ್ಕಾರ ಇದುವರೆಗೂ ಯಾವುದೇ ಕ್ರಮತೆಗೆದುಕೊಂಡಿಲ್ಲ ಎಂದರು.

ಈ ಪ್ರಕರಣದಲ್ಲಿ ರಾಜಕೀಯ ಮಾಡಬಾರದು. ಇದು ಲವ್ ಜಿಹಾದ್ ಗಾಗಿ ನಡೆದ ಕೊಲೆ. ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯದೆ, ನ್ಯಾಯಾಂಗ ಬಂಧನದಲ್ಲಿ ಇರಿಸಿದ್ಯಾಕೆ? ಸಿಐಡಿ ತನಿಖೆ ಬಗ್ಗೆ ನಂಬಿಕೆ ಇಲ್ಲ ಅಂತಾ ಹೇಳಿದರು.

ಈ ವೇಳೆ ಮಾಜಿ ಸಿಎಂ, ಶಾಸಕ ಬಸವರಾಜ್ ಬೊಮ್ಮಾಯಿ, ಶಾಸಕ ಮಹೇಶ್ ಟೆಂಗಿನಕಾಯಿ ಸೇರಿ ಇತರರಿದ್ದರು.




Leave a Reply

Your email address will not be published. Required fields are marked *

error: Content is protected !!