ಭೋಜಪುರಿ ನಟಿ ಅಮೃತಾ ಆತ್ಮಹತ್ಯೆ!

98

ಪ್ರಜಾಸ್ತ್ರ ಸುದ್ದಿ

ಬಿಹಾರ: ಭೋಜಪುರಿ ನಟಿ ಅಮೃತಾ ಪಾಂಡ್ಯ ಶವ ಆಕೆ ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ನಲ್ಲಿ ಶನಿವಾರ ಪತ್ತೆಯಾಗಿದೆ ಎಂದು ಇದೀಗ ಬೆಳಕಿಗೆ ಬಂದಿದೆ. ಸಾಯುವ ಪೂರ್ವದಲ್ಲಿ ಮಾರ್ಮಿಕವಾಗಿ ವಾಟ್ಸಪ್ ಸ್ಟೇಟಸ್ ಇಟ್ಟಿದ್ದಳು ಎಂದು ತಿಳಿದು ಬಂದಿದೆ. ಅವರ ಜೀವನ ಎರಡು ದೋಣಿಗಳಲ್ಲಿತ್ತು. ‘ನಾವು ನಮ್ಮ ದೋಣಿಯನ್ನು ಮುಳುಗಿಸುವ ಮೂಲಕ ಅವರ ಹಾದಿ ಸುಲಭಗೊಳಿಸಿದ್ದೇವೆ’ ಎಂದು ವಾಟ್ಸಪ್ ಸ್ಟೇಟಸ್ ಇಟ್ಟಿದ್ದಳು.

27 ವರ್ಷದ ನಟಿ ಅದ್ಮಪುರಶಿಪ್ ಘಾಟ್ ನಲ್ಲಿರುವ ದಿವ್ಯಧರ್ಮ ಅಪಾರ್ಟ್ ಮೆಂಟ್ ನಲ್ಲಿ ಘಟನೆ ನಡೆದಿದೆ. ಏಪ್ರಿಲ್ 27ರಂದು ಸುಮಾರು 3.30ರ ಹೊತ್ತಿಗೆ ಸಹೋದರಿ ಅಮೃತಾ ರೂಮಿಗೆ ಹೋದಾಗ ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದಳು. ನೆರೆಯವರ ಸಹಾಯದಿಂದ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದಾಗಲೇ ಮೃತಪಟ್ಟಿದ್ದಳು ಎಂದು ವೈದ್ಯರು ಹೇಳಿದ್ದಾರಂತೆ.

ಮುಂಬೈ ಮೂಲದ ಎನಿಮೇಷನ್ ಇಂಜನಿಯರ್ ಚಂದ್ರಮಣಿ ಎಂಬುವವರನ್ನು 2022ರಲ್ಲಿ ಮದುವೆಯಾಗಿದ್ದಳು. ಚಂದ್ರಮಣಿ ಛತ್ತೀಸಗಡದ ಬಿಸ್ಲಾಪುರ ಮೂಲದವರು. ಭೋಜಪುರಿ ಮಾತ್ರವಲ್ಲದೆ ಹಿಂದಿ ಸಿನಿಮಾ, ಧಾರವಾಹಿ ವೆಬ್ ಸೀರಿಸ್ ಗಳಲ್ಲಿಯೂ ನಟಿಸಿದ್ದಳು. ನಟಿ ಸಾವಿನ ಕುರಿತು ಬಿಹಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!