ಪೆನ್ ಡ್ರೈವ್ ಹಿಂದೆ ಬ್ಲ್ಯಾಕ್ ಮೇಲ್ ಕಿಂಗ್ ಕುಮಾರಸ್ವಾಮಿ: ಡಿಸಿಎಂ ಡಿಕೆಶಿ

91

ಪ್ರಜಾಸ್ತ್ರ ಸುದ್ದಿ

ಚಿಕ್ಕಮಗಳೂರು: ಅಶ್ಲೀಲ ವಿಡಿಯೋಗೆ ಸಂಬಂಧಿಸಿದ ಪೆನ್ ಡ್ರೈವ್ ವಿಚಾರ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನಡುವೆ ನಿತ್ಯ ಆರೋಪ, ಪ್ರತ್ಯಾರೋಪ ನಡೆದಿದೆ. ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಲೀಕ್ ಹಿಂದೆ ಬ್ಲ್ಯಾಕ್ ಮೇಲ್ ಕಿಂಗ್ ಕುಮಾರಸ್ವಾಮಿ ಇದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ.

ಕುಮಾರಣ್ಣ ನನ್ನ ರಾಜೀನಾಮೆ ಬಯಸುತ್ತಿದ್ದಾರೆ. ಒಕ್ಕಲಿಗ ನಾಯಕರ ಪೈಪೋಟಿಯಂತೆ. ರಾಜೀನಾಮೆ ಕೊಡೋಣ. ಮುಗಿಸೋದೆ ಅವರ ಕೆಲಸ ಅಲ್ವಾ, ಕಿಂಗ್ ಆಫ್ ಬ್ಲ್ಯಾಕ್ ಮೇಲ್ ಎಂದು ತೀವ್ರ ವಾಗ್ದಾಳಿ ನಡೆಸಿದರು.

ನಮ್ಮದು, ರೇವಣ್ಣ ಕುಟುಂಬ ಬೇರೆ ಅಂದರು. ಉಪ್ಪು ತಿಂದವರು ನೀರು ಕುಡಿತಾರೆ ಅಂದರು. ಈಗ್ಯಾಕೆ ಉರಿ. ಇವರೇನು ಲಾಯರಾ, ಜಡ್ಜಾ, ಇನ್ನು ಟೈಂ ಇದೆ. ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಗೆ ಬರಲಿ. ನನ್ನ ಮೇಲೆ ಆರೋಪ ಮಾಡದಿದ್ರೆ ಇವರು ಮಾರ್ಕೆಟ್ ಓಡಲ್ಲ. ನನ್ನ ಹೆಸರು ಇರದಿದ್ರೆ ನೀವು ಸುದ್ದಿ ತೋರಿಸಲ್ಲ. ಅವರಿಗೆ ನನ್ನ ಹೆಸರು ಇರದಿದ್ರೆ ನಿದ್ದೆ ಬರಲ್ಲವೆಂದು ಕಾಲೆಳೆದರು.




Leave a Reply

Your email address will not be published. Required fields are marked *

error: Content is protected !!