ಜೇಬು ತುಂಬಿಸುವ ಗಲಾಟೆ ಹೂವು

1311

ನೂರಾರು ಎಕರೆ ಜಮೀನು ಇದ್ದರೂ ಸರಿಯಾಗಿ ಬೆಳೆ ತೆಗೆಯಲು ಆಗುತ್ತಿಲ್ಲ. ಇದರಲ್ಲೂ ಬರದ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ ರೈತರ ಬದುಕು ಸಾಕಷ್ಟು ಹೈರಾಣಾಗಿದೆ. ಇದರ ನಡುವೆಯೂ ಕೆಲ ರೈತರು ಇರೋ ತುಂಡು ಭೂಮಿಯಲ್ಲಿ ಚಿನ್ನ ಬೆಳೆಯುತ್ತಿದ್ದಾರೆ. ದೀರ್ಘಾವಧಿ ಬೆಳೆಗಳ ಜೊತೆಗೆ ಮಿಶ್ರಬೆಳೆ, ವಾಣಿಜ್ಯ ಬೆಳೆ, ಹಣ್ಣು ಹಾಗೂ ಹೂವುಗಳನ್ನ ಬೆಳೆಯುವ ಮೂಲಕ ಕೃಷಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

ಗಲಾಟೆ ಹೂವು

ವಿಜಯಪುರ ಹಾಗೂ ಬಾಗಲಕೋಟೆ ರೈತರ ಪಾಲಿಗೆ ಗಲಾಟೆ ಹೂವು ಹೊಸ ಚೈತನ್ಯ ತುಂಬಿದೆ. ಇಲ್ಲಿನ ಬಿಸಿಲಿನ ತಾಪಮಾನ ಗರಿಷ್ಠ 34 ದಾಟಿದ್ರೂ, ಗಲಾಟೆ ಹೂವಿನ ವ್ಯಾಪಾರದಿಂದ ಒಂದಿಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ. ಕೇವಲ ಅರ್ಧ ಎಕರೆ, ಒಂದು ಎಕರೆ ಭೂಮಿಯಲ್ಲಿ ಗಲಾಟೆ ಹೂವು ಬೆಳೆದು ಲಾಭ ಪಡೆಯಬಹುದಾಗಿದೆ. 70 ರೂಪಾಯಿ ನೀಡಿದ್ರೆ 100 ಸಸಿಗಳು ಸಿಗುತ್ತವೆ. ಅವುಗಳನ್ನು ಮೊದಲು ನಾಟಿ ಮಾಡಬೇಕು. ಹತ್ತು ದಿನಗಳ ನಂತರ ಹಾಯಿಸುವ ನೀರಿನ ಜೊತೆಗೆ ಸಾವಯವ ಗೊಬ್ಬರ ನೀಡುತ್ತಾ ಹೋದ್ರೆ, ಎರಡು ತಿಂಗಳಲ್ಲಿ ಸಸಿಗಳು ಹೂ ಬಿಡಲು ಶುರು ಮಾಡುತ್ತವೆ. ದಿನಕ್ಕೆ ಮೂರು ಬಾರಿಯಂತೆ ಎರಡು ತಿಂಗಳ ಕಾಲ ನೀರು ಹಾಯಿಸಿದ್ರೆ, ಗಲಾಟೆ ಹೂವಿನ ಫಸಲು ರೈತರ ಜೇಬನ್ನು ತುಂಬಿಸುತ್ತೆ.

ಹಬ್ಬದ ಟೈಂನಲ್ಲಿ ಕೆಜಿಗೆ 100 ರಿಂದ 150 ರೂಪಾಯಿ ತನಕ ಮಾರಾಟವಾಗುತ್ತೆ. ಉಳಿದ ಟೈಂನಲ್ಲಿ 60 ರೂಪಾಯಿಗೂ ಹೆಚ್ಚು ಬೆಲೆಗೆ ಮಾರಾಟವಾಗುವ ಮೂಲಕ ಅನ್ನದಾತನ ಬಾಳಲ್ಲಿ ಯಾವುದೆ ಗಲಾಟೆಯಿಲ್ಲದಂತೆ ನೋಡಿಕೊಳ್ಳುತ್ತಿದೆ.

ನೋಡಲು ಸೇವಂತಿಗೆ ಹೂವಿನಂತೆ ಕಾಣುವ ಗಲಾಟೆ ಹೂವಿನಲ್ಲಿ ಹಳದಿ, ಕೆಂಪು ಸೇರಿದಂತೆ ಬೇರೆ ಬೇರೆ ಬಣ್ಣಗಳ ಹೂವುಗಳು ಸಹ ಸಿಗುತ್ತವೆ. ವಿಜಯಪುರ, ಬಾಗಲಕೋಟೆ, ಜಮಖಂಡಿ ಭಾಗದ ಅನೇಕ ಹಳ್ಳಿಗಳಲ್ಲಿ ಗಲಾಟೆ ಹೂವುಗಳನ್ನು ಬೆಳೆದ ರೈತರನ್ನ ಕಾಣಬಹುದು. ಹಬ್ಬದ ಟೈಂನಲ್ಲಿ ಕೆಜಿಗೆ 100 ರಿಂದ 150 ರೂಪಾಯಿ ತನಕ ಮಾರಾಟವಾಗುತ್ತೆ. ಉಳಿದ ಟೈಂನಲ್ಲಿ 60 ರೂಪಾಯಿಗೂ ಹೆಚ್ಚು ಬೆಲೆಗೆ ಮಾರಾಟವಾಗುವ ಮೂಲಕ ಅನ್ನದಾತನ ಬಾಳಲ್ಲಿ ಯಾವುದೆ ಗಲಾಟೆಯಿಲ್ಲದಂತೆ ನೋಡಿಕೊಳ್ಳುತ್ತಿದೆ.

ಪ್ರತಿಯೊಂದು ಕ್ಷೇತ್ರದ ತಾಜಾ ಸುದ್ದಿಯನ್ನು ಪಡೆಯಲು ಪ್ರಜಾಸ್ತ್ರ ವೆಬ್ ಪೋರ್ಟಲ್ ಫಾಲೋ ಮಾಡಿ ಮತ್ತು ಫೇಸ್ ಬುಕ್ ಪೇಜ್ ಲೈಕ್ ಮಾಡಿ.




Leave a Reply

Your email address will not be published. Required fields are marked *

error: Content is protected !!