ಮರಳಿ ಬಂದ ‘ಶಂಕರ್ ನಾಗ್’..

2671

ಬೆಂಗಳೂರು : ಶಂಕರ್ ನಾಗ್ ಅಂದರೆ ಸಾಕು, ಚಿತ್ರ ಪ್ರೇಮಿಗಳಿಂದ ಹಿಡಿದು ಆಟೋ ಚಾಲಕರತನಕ ಪ್ರತಿಯೊಬ್ಬರು ಪ್ರೀತಿ ಮಾಡುತ್ತಾರೆ. ಚಂದನವನಕ್ಕೆ ಹೊಸ ಟಚ್ ಕೊಟ್ಟ ಎವರ್ ಗ್ರೀನ್ ಆ್ಯಕ್ಟರ್ ಆ್ಯಂಡ್ ಡೈರೆಕ್ಟರ್. ಇಂಥಾ ಅದ್ಭುತ ನಟನಿಗೂ ಬೆಂಗಳೂರಿನ ಎಂ.ಜಿ ರೋಡ್ ನಲ್ಲಿರುವ ಶಂಕರ್ ನಾಗ್ ಥಿಯೇಟರ್ ಗೂ ಒಂದು ನಂಟಿದೆ. ಕಳೆದ ಎರಡು ವರ್ಷಗಳ ಹಿಂದೆ ತನ್ನ ಆಟಕ್ಕೆ ಬ್ರೇಕ್ ಹಾಕಿದ್ದ ಚಿತ್ರಮಂದಿರ ಇದೀಗ ರೀ ಓಪನ್ ಆಗಿದೆ.

ಇದರಲ್ಲಿ ಏನು ಹೊಸದಿದೆ ಅಂತಾ ಕೇಳಬಹುದು. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಇಡೀ ಭಾರತೀಯ ಸಿನಿಮಾ ಕ್ಷೇತ್ರ ತಿರುಗಿ ನೋಡುವಂತೆ ಮಾಡಿದ್ದು ಇದೇ ಕರಾಟೆ ಕಿಂಗ್. ಆದ್ರೆ,1991ರಲ್ಲಿ  ಚಿಕ್ಕ ವಯಸ್ಸಿಗೆ ಬದುಕಿನ ನಟನೆ ಮುಗಿಸಿದ್ದು ಮಾತ್ರ ದುರಂತ. ಇದಾದ ಬಳಿಕ ‘ಸಿಂಫನಿ’ ಅನ್ನೋ ಹೆಸರಿನ ಚಿತ್ರಮಂದಿರವನ್ನು ಅವರ ನೆನಪಿಗಾಗಿ ಶಂಕರ್ ನಾಗ್ ಎಂದು ಬದಲಾಸಲಾಯಿತು.

ಇದೀಗ ಶಂಕರ್​ ನಾಗ್​ ಸ್ವಾಗತ್ ಓನಿಕ್ಸ್ ಅನ್ನೋ ಹೆಸರಿನಲ್ಲಿ ಪ್ರದರ್ಶನಕ್ಕೆ ಸಜ್ಜಾಗಿದೆ. ಬರೋಬ್ಬರಿ 600ಕ್ಕೂ ಹೆಚ್ಚು ಸೀಟ್ ಗಳನ್ನು ಹೊಂದಿರುವ ಥಿಯೇಟರ್, 14 ಅಡಿ ಎಲ್‍ಇಡಿ ಸ್ಕ್ರೀನ್‍ ಹಾಗೂ 3ಡಿ ತಂತ್ರಜ್ಞಾನ ಹೊಂದಿದೆ. ಈ ಮೂಲಕ ಚೀನಾ ಮತ್ತು ಮಲೇಷ್ಯಾ ನಂತರ ಬೆಂಗಳೂರಿನಲ್ಲಿಯೇ ಇರೋದು ಜಗತ್ತಿನ ಅತಿದೊಡ್ಡ ಎಲ್‍ಇಡಿ ಚಿತ್ರಮಂದಿರ.

ನಟ ಶಂಕರ್ ನಾಗ್

ಕಳೆದ 38 ವರ್ಷಗಳಿಂದ ಚಿತ್ರ ರಸಿಕರಿಗೆ ಮನರಂಜನೆ ನೀಡುತ್ತಿರುವ ಥಿಯೇಟರ್ ಎರಡು ವರ್ಷಗಳ ನಂತರ ರೀ ಓಪನ್ ಆಗಿದ್ದು ಎಲ್ಲರಿಗೂ ಖುಷಿ ನೀಡಿದೆ.

ಪ್ರತಿಯೊಂದು ಕ್ಷೇತ್ರದ ತಾಜಾ ಸುದ್ದಿಯನ್ನು ಪಡೆಯಲು ಪ್ರಜಾಸ್ತ್ರ ವೆಬ್ ಪೋರ್ಟಲ್ ಫಾಲೋ ಮಾಡಿ ಮತ್ತು ಫೇಸ್ ಬುಕ್ ಪೇಜ್ ಲೈಕ್ ಮಾಡಿ.




Leave a Reply

Your email address will not be published. Required fields are marked *

error: Content is protected !!