ಕೆಲಸಕ್ಕಾಗಿ ಊರು ಬಿಟ್ಟು ಬಂದವನಿಗೆ ಸಂಸ್ಥೆ ಬಿಡೋದಕ್ಕೆ ಆಗಲ್ವಾ..?

2767

ಪ್ರಿಯ ಓದುಗ ಸ್ನೇಹಿತರೆ, ಕಳೆದೆರಡು ತಿಂಗಳ ಹಿಂದೆ ಈ ಅಂಕಣ ಶುರುವಾಯ್ತು. ಭಯ, ಆತಂಕದ ನಡುವೆಯೇ ಈ ಕಾರ್ಯಕ್ಕೆ ಕೈ ಹಾಕಿದೆ. ಅಂಕಣ ಬರೆಯುವಷ್ಟು ಜ್ಞಾನದ ಒಳ ಹೊರ ಹರಿವು ಇದ್ಯಾ ಗೊತ್ತಿಲ್ಲ. ಆದ್ರೆ, ಹೊಸ ಅನುಭವ ಮಾತ್ರ ಸಿಗ್ತಿದೆ. ಕೆಲವರು ನನ್ನ ಅಂಕಣಕ್ಕೆ ಕಾಯುತ್ತೇವೆ. ಈ ವಾರ ಯಾವ ವಿಷಯ. ನಾನು ನಿಮ್ಮ ಅಂಕಣದ ಫ್ಯಾನ್ ಅಂತೆಲ್ಲಾ Message ಮಾಡಿದಾಗ ಖುಷಿಯಾಗುತ್ತೆ. ಇನ್ನು ಕೆಲವರು ಈ ವಿಚಾರಗಳ ಬಗ್ಗೆ ಬರೆಯಿರಿ ಸರ್ ಅಂತಾ ಸಲಹೆ ನೀಡ್ತಾರೆ. ಇದೆಲ್ಲ ನೋಡಿದಾಗ My choice might be right ಅನಿಸುತ್ತೆ. ತುಂಬಾ ಕಷ್ಟವಿದೆ ಅನ್ನೋದು ಸತ್ಯವಾದ್ರೂ ಬದುಕಿನಲ್ಲಿ ಖುಷಿಯಿದೆ.

ನಿಮ್ಗೆ ಅನಿಸ್ತಿದೆ Why I am saying all this ಅಂತ. ಕಾರಣವಿಷ್ಟೆ, ನನ್ನ ಅಂಕಣ ಓದಿಕೊಂಡು ಬರ್ತಿರುವವರಿಂದ ಬಂದ ಸಲಹೆಗಳಲ್ಲಿ, ಮಾಧ್ಯಮದೊಳಗಡೆ ನಡೆಯುವ ಶೋಷಣೆ ಬಗ್ಗೆ ಬರೆಯಿರಿ ಅನ್ನೋದು ಸಹ ಆಗಿದೆ. ಇದರ ಬಗ್ಗೆ ನಾನು ಈ ಹಿಂದೆ ಹಲವು ಬಾರಿ ಯೋಚಿಸಿದ್ದೆ. ಅರೆ, ಇದೇನು.. ಸರ್ಕಾರಿ ಸಂಸ್ಥೆಗಳಲ್ಲಿ ಸೇರಿ ಬೇರೆ ಬೇರೆ ಕಡೆ ಶೋಷಣೆ ನಡೆಯುತ್ತೆ. ಅದನ್ನ ಮಾಧ್ಯಮದಲ್ಲಿ ತೋರಿಸಲಾಗುತ್ತೆ. ಅಂಥಾ ಮಾಧ್ಯಮದಲ್ಲಿಯೇ ಶೋಷಣೆನಾ ಅನ್ನೋ ಪ್ರಶ್ನೆ ಮೂಡುತ್ತೆ. Yes, definitely going on. ಆದ್ರೆ, ಇದು ಕಣ್ಣಿಗೆ ಕಾಣಿಸದ ಭಾವನೆಗಳ ಜೊತೆ ಆಡುವ ಆಟ. ಯಾರು? ಹೇಗೆ? ಯಾವ ಪ್ರಮಾಣದಲ್ಲಿ ನಮ್ಮ ಮೇಲೆ ಸವಾರಿ ಮಾಡ್ತಿದ್ದಾರೆ ಅನ್ನೋದು ಅರ್ಥೈಸಿಕೊಳ್ಳೋದು ಕಷ್ಟಸಾಧ್ಯ.

ಸಂಬಳದ ವಿಚಾರದಲ್ಲಿ ಸಂಸ್ಥೆಗಳು ನಡೆದುಕೊಳ್ಳುವ ನಡೆ ಬಗ್ಗೆ ಗಂಭೀರ ಚಿಂತನೆಯಾಗಬೇಕಿದೆ. ಅಂದ್ರೆ, ಕೆಲವೊಂದು ಸಂಸ್ಥೆಗಳಲ್ಲಿ(ಮುದ್ರಣ, ದೃಶ್ಯ ಮಾಧ್ಯಮ) ಸರಿಯಾದ ಟೈಂಗೆ ಸಂಬಳವಾಗಲ್ಲ ಅನ್ನೋದು. ಹೊಸದಾಗಿ ಕೆಲಸಕ್ಕೆ ಸೇರಿದ ಪತ್ರಕರ್ತರಾಗಿದ್ದರೆ ರೂಮ್ ಬಾಡಿಗೆ, ಊಟದ ಖರ್ಚು, ಓಡಾಟದ ಖರ್ಚು ನಿಭಾಯಿಸೋದು ಕಷ್ಟ. Seniors ಇದ್ರೆ, ಕುಟುಂಬ ನಿರ್ವಹಣೆ, ಮಕ್ಕಳ ಸ್ಕೂಲ್ ಫೀಸ್, ಬ್ಯಾಂಕ್ ಸಾಲ, ಇಎಂಐ ಹೀಗೆ ಹತ್ತು ಹಲವು ಇವೆ. ಸಂಬಳವನ್ನೇ ನಂಬಿಕೊಂಡು ಬದುಕುವ ಪತ್ರಕರ್ತರಿಗೆ ಇದೊಂದು ರೀತಿಯ ಮಾಸಿಕ ಮಾನಸಿಕ ಕಿರುಕುಳ ಅನಿಸಲ್ವೆ?

ಇನ್ನು ಆಫೀಸ್ ನಲ್ಲಿರುವ ಗುಂಪುಗಾರಿಕೆ. ಇಲ್ಲಿ ತಮ್ಮ ಆಪ್ತರ ತಪ್ಪು ಒಪ್ಪುಗಳಿಗೆ ಸಮ್ಮತಿಯಿರುತ್ತೆ. ಇದು ಎಲ್ಲ ಕ್ಷೇತ್ರದಲ್ಲಿ Common ಅಂತಾ ಹೇಳಬಹುದು. ಆದ್ರೆ, ಅಲ್ಲಿ Salary hikeಗೆ ಸಮಸ್ಯೆಯಾಗೋದಿಲ್ಲ. ಸರ್ಕಾರಿ ಸಂಸ್ಥೆಯಾಗಿದ್ರೆ ಈ ಪ್ರಶ್ನೆ ಬರಲ್ಲ. ಮಾಧ್ಯಮದಲ್ಲಿ ಇದ್ರಿಂದಾಗಿ ಅದೆಷ್ಟೋ ಜನಕ್ಕೆ ಸರಿಯಾಗಿ ಸಿಗಬೇಕಾದ ಸಂಬಳ ಸಿಗುತ್ತಿಲ್ಲ. Salary hike ವಿಚಾರದಲ್ಲಿ ಒಂದಿಷ್ಟು ಹೆಚ್ಚು ಕಡಿಮೆ ಇರುತ್ತೆ. ಇದನ್ನ ಒಪ್ಪಿಕೊಳ್ಳೋಣ. But, ಕೆಲವು ಸಾರಿ ಸಿಗಬೇಕಾದವರಿಗೆ ಅನ್ಯಾಯವಾಗಿ ಬಿಡುತ್ತೆ. ಇದು Affecting his/her carrier.

ಕೆಲ ಹಿರಿಯ ವೃತ್ತಿ ಸಂಗಾತಿಗಳು ಕೆಲಸದ ವಿಚಾರದಲ್ಲಿಯೂ Differentiation ಮಾಡ್ತಾರೆ. ತಮಗೆ ಬೇಕಾದವರಿಂದ ಕೆಲಸ ಮಾಡಿಸಿ ಎಲ್ಲರ ದೃಷ್ಟಿಯಲ್ಲಿ, ಸಂಸ್ಥೆಯ ಮುಖ್ಯಸ್ಥರ ದೃಷ್ಟಿಯಲ್ಲಿ ಅವರು ತುಂಬಾ ಕೆಲಸ ಮಾಡ್ತಾರೆ ಅಂತಾ ತೋರಿಸೋದು. ಮತ್ತೊಬ್ಬರು ಸರಿಯಾಗಿ ಕೆಲಸ ಮಾಡಲ್ಲ ಅಂತಾ ಬಿಂಬಿಸುವುದು. ಡೆಸ್ಕ್ ನಲ್ಲಿ ಕೆಲಸ ಮಾಡುವ ಹಾಗೂ ವರದಿಗಾರಿಕೆ ಮಾಡುವ ಬಹುತೇಕರಿಗೆ ಇದರ ಅನುಭವಾಗಿರುತ್ತೆ. ಇದು Psychological ಕಿರುಕುಳ ಅನಿಸುವುದಿಲ್ಲವೆ? ಇನ್ನು ಕೆಲವರು ತಮಗೆ ಆಗದವರಿಗೆ ಪದೆಪದೆ ಹೆಚ್ಚಿಗೆ ಕೆಲಸ ಕೊಡುವುದು. ಮಾಡಿದ ಕೆಲಸದಲ್ಲಿ ತಪ್ಪು ಹುಡುಕುವುದು. ವೈಯಕ್ತಿಕ ಕಾರಣಗಳಿಗೆ ಕೇಳುವ ರಜೆ, ಸಮಯ ಹೊಂದಾಣಿಕೆ ವಿಚಾರದಲ್ಲಿ Control ಮಾಡಲು ನೋಡ್ತಾರೆ ಅನ್ನೋ ಭಾವನೆ ಮೂಡಿದಾಗ ಅವರೊಳಗಿನ ಯಾತನೆ, ಹಿಂಸೆ ಅವರಿಗೆ ಮಾತ್ರ ಗೊತ್ತು. ಹೀಗಾಗಿ ಇಂದು ಯಾವ ಪತ್ರಕರ್ತರು ಸಹ ಒಂದೇ ಸಂಸ್ಥೆಯಲ್ಲಿ ತಮ್ಮ ವೃತ್ತಿಯನ್ನ ಸಂಪೂರ್ಣವಾಗಿ ಮುಗಿಸಲು ಸಾಧ್ಯವಾಗ್ತಿಲ್ಲ.!

ಕೆಲವು ಕಡೆ ಸಂಸ್ಥೆ ಚೆನ್ನಾಗಿದ್ದು, ಸಂಬಳ ಸರಿಯಾದ ಟೈಂಗೆ ಆಗ್ತಿದ್ದು, ಆರ್ಥಿಕವಾಗಿ ಯಾವುದೇ ಸಮಸ್ಯೆ ಇರೋದಿಲ್ಲ. ಆದ್ರೆ, ಆ ಸಂಸ್ಥೆಯ ಒಳಗೆಯಿರುವ Some people ಆಡುವ ಆಟ ನಿಜಕ್ಕೂ ಬೇಸರ ಮೂಡಿಸುತ್ತೆ. ಪ್ರಾದೇಶಿಕವಾಗಿ ನೋಡುವ ದೃಷ್ಟಿಕೋನ ಅತ್ಯಂತ ಅಪಾಯಕಾರಿಯಾಗಿದೆ. ಪ್ರತಿಭೆಯಿದ್ದ ಸಿಬ್ಬಂದಿಕ್ಕಿಂತ ತನ್ನೂರು, ತಮ್ಮ ಭಾಗದವರು, ತಮ್ಮ ಭಾಷೆಯವರು(ಕನ್ನಡ ಮಾಧ್ಯಮದಲ್ಲಿ ತಮಿಳು, ತೆಲುಗು, ತುಳು, ಮಲಿಯಾಳಿಯವರು ಇದ್ದಾರೆ.) ಅನ್ನೋ ಒಂದೇ ಒಂದು ಕಾರಣಕ್ಕೆ ಅವರನ್ನ ಬೆಳೆಸುವ ಕೆಲಸವಾಗುತ್ತೆ. ಇದು ಹೇಗೆ ನಡೆಯುತ್ತೆ ಅನ್ನೋ ಸಣ್ಣ ಸುಳಿವು ಸಹ ಸಿಗೋದಿಲ್ಲ. ನಯ, ವಿನಯ, ಗೌರವದಿಂದ ಮಾತ್ನಾಡುತ್ತಲೇ ಬೇರೆಯವರನ್ನ ದೂರ ತಳ್ಳುವ ಕೆಲಸವಾಗ್ತಿದೆ. ಇದರ ಬಿಸಿ ತಾಗಿದ ವ್ಯಕ್ತಿಗೆ ಮಾತ್ರ ಅದರ ನೋವು ಗೊತ್ತಾಗಲು ಸಾಧ್ಯ.

ಮಾಧ್ಯಮ ಮೊದಲೇ ಒತ್ತಡದಲ್ಲಿರುವ ಕ್ಷೇತ್ರ. ಬೇರೆ ವಲಯದಲ್ಲಿ ಇವತ್ತು ಮಾಡಬೇಕಾದ ಕೆಲಸ ನಾಳೆ ಮಾಡಬಹುದು. ಅವರ ಮನಸ್ಸಿಗೆ ಬಂದಾಗ ಮಾಡಿದ್ರೂ ಆಗುತ್ತೆ.! ಇಲ್ಲಿ ಹಾಗಲ್ಲ. ಆಗಿನ ಕೆಲಸ ಆಗಲೇ ಮಾಡಬೇಕು. ಕಾರಣಗಳಿಗೆ ಜಾಗವಿಲ್ಲ. ಇದೆಲ್ಲ ಗೊತ್ತಿದ್ದೂ ಬರ್ತಾರೆ ಅಂದ್ರೆ ಅವರಿಗೆ Journalism fashion ಇದೆ ಎಂದರ್ಥ. ಇಂಥವರಿಗೆ ಪ್ರೋತ್ಸಾಹ, ಹೆಚ್ಚೆಚ್ಚು ಅವಕಾಶಗಳನ್ನ ನೀಡಬೇಕಿದೆ. ಆಫೀಸ್ ನಲ್ಲಿ ಒಂದೊಳ್ಳೆ ವಾತಾವರಣ ನಿರ್ಮಿಸಬೇಕಿದೆ. ಒಂದಿಷ್ಟು ನಗು, ತರ್ಲೆ ಮಾತು, ಹರಟೆ, ಖುಷಿಗೆ ಜಾಗಬೇಕಿದೆ. ಇದು ಇಲ್ದೇ, ಪದೆಪದೆ ಮಾನಸಿಕ ಕಿರುಕುಳ, ಅವಮಾನ, ಪ್ರತಿಭೆಗೆ ಸಿಗಬೇಕಾದ ಗೌರವ ಸಿಗ್ತಿಲ್ಲಂದ್ರೆ ಅಲ್ಲಿಂದ ಹೊರಟು ಬಿಡಬೇಕು. ತನ್ನ ಪ್ರತಿಭೆ, ಕೆಲಸದ ಮೇಲೆ ನಂಬಿಕೆಯಿದ್ರೆ ಎಲ್ಲಿಬೇಕಾದ್ರೂ ಗೌರವದ ಬದುಕು ಕಟ್ಟಿಕೊಳ್ಳಬಹುದು. ಕೆಲಸಕ್ಕಾಗಿ ಊರು ಬಿಟ್ಟು ಬಂದವರಿಗೆ ಒಂದು ಸಂಸ್ಥೆ ಬಿಟ್ಟು ಆಚೆ ಬಂದು ಬದುಕಲು ಆಗೋದಿಲ್ವಾ? ಯೋಚನೆ ಮಾಡಿ..
6 thoughts on “ಕೆಲಸಕ್ಕಾಗಿ ಊರು ಬಿಟ್ಟು ಬಂದವನಿಗೆ ಸಂಸ್ಥೆ ಬಿಡೋದಕ್ಕೆ ಆಗಲ್ವಾ..?

  1. ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ನಮ್ಮೂರು ಸುದ್ದಿ ಜಿಲ್ಲಾ ರಿಪೋರ್ಟರ್

    ಸ್ವಾಭಿಮಾನಿ ಪತ್ರಕರ್ತನ ಮಾತು, ಸುಪರ್ ಬ್ರದರ್.ಶುಭೋದಯ.

    Reply

Leave a Reply

Your email address will not be published. Required fields are marked *

error: Content is protected !!