ರಸ್ತೆ ಅಪಘಾತ, ಪತ್ನಿ ಎದುರೇ ಪತಿ ಸಾವು

122

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಮೃತಪಟ್ಟ ಘಟನೆ ಆಳಂದ ತಾಲೂಕಿನ ಢೋಗಿ ನಾಲಾ ಹತ್ತಿರ ಶನಿವಾರ ನಡೆದಿದೆ. ಅರ್ಜುನ್ ಎನ್ನುವ ಬೈಕ್ ಸವಾರ ಮೃತಪಟ್ಟಿದ್ದಾನೆ. ಈತನ ಪತ್ನಿಗೆ ಗಂಭೀರ ಗಾಯವಾಗಿದೆ.

ಗಾಯಾಳು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿಯ ಎದುರೇ ಪತಿ ಒದ್ದಾಡಿ ಪ್ರಾಣಬಿಟ್ಟಿದ್ದಾನೆ. ಇದರಿಂದ ಮಹಿಳೆ ಮತ್ತಷ್ಟು ಆಘಾತಕ್ಕೆ ಒಳಗಾಗಿದ್ದಾಳೆ. ನರೋಣಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪುಣೆಯಿಂದ ಬೈಕ್ ಮೇಲೆ ಮುಂಜಾನೆ ಯಾದಗಿರಿ ಕಡೆ ಹೊರಟಿದ್ದರು. ನೋಡಿದರೆ ಈ ದುರಂತ ನಡೆದಿದೆ. ಅರ್ಜುನ್ ದಂಪತಿ ಯಾದಗಿರಿಯ ಬಳಿಚಕ್ರ ಗ್ರಾಮದವರೆಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!