ಬಾಲಕಿ ಮೇಲೆ ಅತ್ಯಾಚಾರ, ತಪ್ಪಿಸಿಕೊಳ್ಳಲು ಹೋದ ಆರೋಪಿ ಕಾಲಿಗೆ ಗುಂಡೇಟು

73

ಪ್ರಜಾಸ್ತ್ರ ಅಪರಾಧ ಸುದ್ದಿ

ಹುಬ್ಬಳ್ಳಿ: ಬಾಲಕಿಯೊಂದಿಗೆ ಸ್ನೇಹ ಬೆಳಸಿದ ಯುವಕನೊಬ್ಬ ಪ್ರೀತಿಸುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ಆರೋಪದ ಮೇಲೆ ಬಂಧಿಸಲು ಹೋದಾಗ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಸುದ್ದಾಂ ಹುಸೇನ್ ಬಂಧಿತ ಆರೋಪಿಯಾಗಿದ್ದಾನೆ. ಬಾಲಕಿ ವಾಂತಿ, ಹೊಟ್ಟೆನೋವು ಎಂದಾಗ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ಅಪ್ರಾಪ್ತೆ ಗರ್ಭಿಣಿ ಎನ್ನುವುದು ತಿಳಿದಿದೆ. ವಿಷಯ ತಿಳಿದ ಆರೋಪಿ ಬಾಲಕಿಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಇದನ್ನು ತಿಳಿದ ಪೋಷಕರು ನವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಅಡಿ ಕೇಸ್ ದಾಖಲಿಸಿದ್ದಾರೆ.

ಆರೋಪಿಯನ್ನು ಪೊಲೀಸರು ತಕ್ಷಣ ಬಂಧಿಸಿದ್ದಾರೆ. ಮಾಹಿತಿ ಸಂಗ್ರಹಕ್ಕಾಗಿ ಸುತ್ತಗಟ್ಟಿ ಗ್ರಾಮಕ್ಕೆ ಶುಕ್ರವಾರ ರಾತ್ರಿ ಸುಮಾರು 12.10ರ ಸುಮಾರಿಗೆ ತೆರಳಿದಾಗ ಆರೋಪಿ ಪೊಲೀಸರ ಮೇಲೆ ಬಟನ್ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಇನ್ಸ್ ಪೆಕ್ಟರ್ ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!