ಸಾಮೂಹಿಕ ರಜೆ: ಸಿಬ್ಬಂದಿ ವಜಾ ಮಾಡಿದ ಏರ್ ಇಂಡಿಯಾ ಎಕ್ಸ್ ಪ್ರೆಸ್

64

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಅನ್ಯಾರೋಗ್ಯದ ಕಾರಣಕ್ಕೆ 200 ಸಿಬ್ಬಂದಿ ಸಾಮೂಹಿಕ ರಜೆ ಮಾಡಿದ ಪರಿಣಾಮ, ಬುಧವಾರ 70ಕ್ಕೂ ಹೆಚ್ಚು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳ ಸಂಚಾರ ರದ್ದುಗೊಳಿಸಲಾಗಿತ್ತು. ಇದೀಗ ಸಿಬ್ಬಂದಿಗೆ ಸಂಸ್ಥೆ ಶಾಕ್ ನೀಡಿದ್ದು, 35 ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿದೆ.

ಗುರುವಾರ ಸಹ ವಿಮಾನ ಹಾರಾಟದಲ್ಲಿ ಕಡಿತಗೊಳ್ಳಲಿದೆ ಎಂದು ತಿಳಿಸಲಾಗಿದೆ. ಉದ್ದೇಶಪೂರ್ವಕವಾಗಿ ಗೈರು ಹಾಜರಾಗಿದ್ದು, ನಿಮ್ಮ ಕೆಲಸ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಕಂಪನಿಗೆ ಮುಜುಗರ, ಅಪಖ್ಯಾತಿ ಹಾಗೂ ಸಾಕಷ್ಟು ಹಣಕಾಸು ನಷ್ಟ ಮಾಡಲಾಗಿದೆ ಎಂದು ವಜಾ ಪತ್ರದಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಕಂಪನಿ ಸಿಇಒ ಅಲೋಕ್ ಸಿಂಗ್, ಸಿಬ್ಬಂದಿ ಸಮಸ್ಯೆಯಿಂದ ಮುಂದಿನ ಕೆಲ ದಿನಗಳವರೆಗೆ ವಿಮಾನಗಳನ್ನು ಕಡಿತಗೊಳಿಸಲಾಗುತ್ತೆ. ಸಿಬ್ಬಂದಿ ಅಲಭ್ಯತೆ, ವೇಳಾಪಟ್ಟಿ ಸರಿಪಡಿಸಲು ಈ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!