ಕೇವಲ 9.4 ಓವರ್ ಗಳಲ್ಲಿ 167 ರನ್.. ಪಿಚ್, ಬೌಲರ್ ಸಮಸ್ಯೆನಾ?

65

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಹೈದ್ರಾಬಾದ್: ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಬುಧವಾರ ಸಂಜೆ ನಡೆದ ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ಲಖ್ನೋ ಸೂಪರ್ ಜಯಂಟ್ಸ್ ನಡುವಿನ ಪಂದ್ಯದಲ್ಲಿ ಹೈದ್ರಾಬಾದ್ ಪಡೆ 10 ವಿಕಟ್ ಗಳ ಭರ್ಜರಿ ಜಯ ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ಕೆ.ಎಲ್ ರಾಹುಲ್ ನಾಯಕತ್ವ ಲಖ್ನೋ ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿದೆ. ಈ ಸ್ಕೋರ್ ಬೆನ್ನು ಹತ್ತಿದ ಎಚ್ಆರ್ ಹೆಚ್ ತಂಡ ಕೇವಲ 9.4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 167 ರನ್ ಬಾರಿಸಿ ಗೆಲುವಿನ ನಗೆ ಬೀರಿದೆ. ಆದರೆ, ಈ ಆಟ ಕ್ರಿಕೆಟ್ ಅಭಿಮಾನಿಗಳು, ವಿಶ್ಲೇಷಕರಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಟಿ-20 ಟೂರ್ನಿ ಅನ್ನೋದು ಹೊಡಿ ಬಡಿ ಆಟವೇ ಆದರೂ ಇಷ್ಟೊಂದು ಪ್ರಮಾಣದ ಕಳಪೆ ಬೌಲಿಂಗ್ ನಡೆಲು ಹೇಗೆ ಸಾಧ್ಯ ಎನ್ನಲಾಗುತ್ತಿದೆ. ಇದರಲ್ಲಿ ಪಿಚ್ ಸಮಸ್ಯೆ ಇದೇನಾ, ಬೌಲರ್ ಗಳ ಸಮಸ್ಯೆನಾ ಗೊತ್ತಾಗುತ್ತಿಲ್ಲ. ಒಳ್ಳೆಯ ಬೌಲರ್ ಗಳು ಸಹ ಇಷ್ಟೊಂದು ಪ್ರಮಾಣದಲ್ಲಿ ರನ್ ಬಿಟ್ಟು ಕೊಡಲು ಹೇಗೆ ಸಾಧ್ಯ ತಿಳಿಯದಾಗಿದೆ. ಅದರಲ್ಲೂ ಈ ಬಾರಿಯ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಬ್ಯಾಟ್ಸ್ ಮನ್ ಗಳು ಮೊದಲು ಬ್ಯಾಟ್ ಮಾಡಿದರೆ 230ಕ್ಕೂ ಅಧಿಕ ರನ್ ಬಾರಿಸುವುದನ್ನು ಅತ್ಯಂತ ಈಜಿ ಮಾಡಿಕೊಂಡಿದ್ದಾರೆ. ಹೀಗಾದರೆ ಬೌಲರ್ ಗಳ ಕ್ರಿಕೆಟ್ ಕರಿಯರ್ ಏನು ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಿದೆ.




Leave a Reply

Your email address will not be published. Required fields are marked *

error: Content is protected !!