ಹ್ಯಾಕರ್ ಶ್ರೀಕಿ ಮತ್ತೆ ಅರೆಸ್ಟ್

80

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: 32.48 ಕೋಟಿ ಮೌಲ್ಯದ ಬಿಟ್ ಕಾಯಿನ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ್ನು ಎಸ್ಐಟಿ ಅಧಿಕಾರಿಗಳು ಮತ್ತೆ ಬಂಧಿಸಿದ್ದಾರೆ.

ಬಿಟ್ ಕಾಯಿನ್ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉನೊ ಕಾಯಿನ್ ಕಂಪನಿಯ ಸಹ ಸಂಪಸ್ಥಾಪಕ ಬಿ.ವಿ ಹರೀಶ್ ತುಮಕೂರಿನ ಸೈಬರ್ ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ತನಿಖೆ ಎಸ್ಐಟಿಗೆ ವಹಿಸಲಾಗಿದೆ.

ವಿಚಾರಣೆಗೆ ಹಾಜರಾಗುವಂತೆ ಶ್ರೀಕಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಆತ ಬಂದಿರಲಿಲ್ಲ. ಹೀಗಾಗಿ ಮತ್ತೆ ಬಂಧಿಸಲಾಗಿದೆ. 2017ರಲ್ಲಿ ಉನೊ ಕಂಪನಿಯ 60.6 ಬಿಟ್ ಕಾಯಿನ್ ಗಳು ಕಳ್ಳತನವಾಗಿದ್ದವು. ಸಧ್ಯ ಇವುಗಳ ಮಾರುಕಟ್ಟೆ ಮೌಲ್ಯ 32.48 ಕೋಟಿ ಆಗಿದೆ.




Leave a Reply

Your email address will not be published. Required fields are marked *

error: Content is protected !!