ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್, 196 ದೇಶಗಳಿಗೆ ಮಾಹಿತಿ

71

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಗಂಭೀರ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಇಂಟರ್ ಪೋಲ್ ಮಾಹಿತಿ ನೀಡಿದೆ ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಬ್ಲೂ ಕಾರ್ನರ್ ನೋಟಿಸ್ ನಿಂದ ಪ್ರಜ್ವಲ್ ರೇವಣ್ಣ ಯಾವ ದೇಶದಲ್ಲಿದ್ದಾರೆ. ಏನು ಮಾಡುತ್ತಿದ್ದಾರೆ ಎನ್ನುವುದು ಎಸ್ಐಟಿಗೆ ಮಾಹಿತಿ ಲಭ್ಯವಾಗಲಿದೆ. ಗಂಭೀರ ಅಪರಾಧಿ ಕೃತ್ಯಗಳ ಆರೋಪಿ ದೇಶ ತೊರೆದು ಹೋಗಿ ತಲೆ ಮರೆಸಿಕೊಂಡಿದ್ದರೆ ಬ್ಲೂ ಕಾರ್ನರ್ ನೋಟಿಸ್ ಹೊರಡಿಸುವ ಮೂಲಕ ತನಿಖಾ ತಂಡಕ್ಕೆ ನೆರವು ನೀಡಲಾಗುತ್ತೆ.

ಈ ನೋಟಿಸ್ ನಿಂದ ಆರೋಪಿಯನ್ನು ವಿಮಾನ ನಿಲ್ದಾಣ, ಬಂದರು, ಗಡಿ ಸೇರಿದಂತೆ ಎಲ್ಲೇ ಕಾಣಿಸಿಕೊಂಡರೂ ಮಾಹಿತಿ ನೀಡುವುದರ ಜೊತೆಗೆ ವಶಕ್ಕೆ ಪಡೆಯಲಾಗುತ್ತೆ. ಇನ್ನು ಇವರ ತಂದೆ ಮಾಜಿ ಸಚಿವ ಹೆಚ್.ಡಿ ರೇವಣ್ಣರನ್ನು ಎಸ್ಐಟಿ ಅಧಿಕಾರಿಗಳು ಈಗಾಗ್ಲೇ ಬಂಧಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!