ಪ್ರಜಾಪ್ರಭುತ್ವದ ರಕ್ಷಣೆಗಾಗಿ ಮತ ಹಾಕಿ: ರಾಹುಲ್ ಗಾಂಧಿ

70

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಲೋಕಸಭೆ ಚುನಾವಣೆ 2ನೇ ಹಂತದ ಮತದಾನ ದೇಶದ 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಇಂದು ನಡೆಯುತ್ತಿದೆ. ಮುಂಜಾನೆ 7ಗಂಟೆಯಿಂದ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಈ ಬಗ್ಗೆ ಟ್ವೀಟ್ ಮೂಲಕ ಮನವಿ ಮಾಡಿರುವ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ, ಮುಂದಿನ ಸರ್ಕಾರ ಬಿಲಿಯನೇರ್ ಅಥವ 140 ಕೋಟಿ ಭಾರತೀಯರದ್ದು ಅನ್ನೋದು ನಿಮ್ಮ ಮತ ನಿರ್ಧರಿಸುತ್ತದೆ. ದೇಶದ ಭವಿಷ್ಯದ ಐತಿಹಾಸಿಕ ಚುನಾವಣೆ ಇದಾಗಿದೆ. ಪ್ರಜಾಪ್ರಭುತ್ವ ರಕ್ಷಣೆಗಾಗಿ ಯೋಧ ಮತದಾರರಾಗಿ ಹಕ್ಕು ಚಲಾಯಿಸಿ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!