ಪ್ರಧಾನಿಯಾದರೂ ಭಜರಂಗದಳ ಕಾರ್ಯಕರ್ತರಂತೆ ಮಾತ್ನಾಡ್ತಾರೆ: ಸಿಎಂ ಸಿದ್ದರಾಮಯ್ಯ

73

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: 10 ವರ್ಷಗಳ ಕಾಲ ಆಡಳಿತ ಮಾಡಿದರೂ ಸಾಧನೆ ಬಗ್ಗೆ ಹೇಳುತ್ತಿಲ್ಲ. ದ್ವೇಷದ ಮಾತು ಹೇಳುತ್ತಿದ್ದಾರೆ. ಪ್ರಧಾನಿಯಾದರೂ ಭಜರಂಗದಳದ ಕಾರ್ಯಕರ್ತರಂತೆ ಮಾತ್ನಾಡ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲುವ ಭೀತಿ ಕಾಡುತ್ತಿದೆ. ಹೀಗಾಗಿ ಸಂವಿಧಾನ ಬದಲಿಸುತ್ತೇವೆ ಎಂದವರು ಈಗ ಸಂವಿಧಾನವೇ ನಮ್ಮ ಧರ್ಮಗ್ರಂಥ ಎಂದು ಜಾಹೀರಾತು ನೀಡುತ್ತಿದ್ದಾರೆ. ಇಂಥವರಿಗೆ ಚಾಟಿ ಬೀಸುವ ಅವಕಾಶ ಮತದಾರರಿಗೆ ಬಂದಿದೆ ಎಂದರು. 400 ಸ್ಥಾನ ಗೆದ್ದರೆ ಸಂವಿಧಾನ ಬದಲಾವಣೆ ಮಾಡುವುದಾಗಿ ಬಿಜೆಪಿ-ಆರ್ ಎಸ್ಎಸ್ ಹೇಳುತ್ತಿದೆ. ಇವರಿಂದ ಸಂವಿಧಾನ ಉಳಿಸುವ ಅನಿವಾರ್ಯ ಸ್ಥಿತಿ ಇದೆ. ಹೀಗಾಗಿ ಈ ಚುನಾವಣೆ 2ನೇ ಸ್ವಾತಂತ್ರ್ಯ ಹೋರಾಟವಾಗಿದೆ. ಈ ಹೋರಾಟದಲ್ಲಿ ಕಾಂಗ್ರೆಸ್ ಗೆಲ್ಲಲ್ಲಿದ್ದು, ಬಿಜೆಪಿ 200 ಸ್ಥಾನ ಗೆಲ್ಲುವುದು ಕಷ್ಟವಿದೆ ಅಂತಾ ಹೇಳಿದರು.

ಮಾಂಗಲ್ಯದ ಬಗ್ಗೆ ಮಾತನಾಡುವ ನೈತಿಕತೆ ಈ ಪ್ರಧಾನಿಗಿಲ್ಲ. ಮನಮೋಹನ್ ಸಿಂಗ್ ಇದ್ದಾಗ ತೊಲೆಗೆ 24 ಸಾವಿರವಿತ್ತು. ಈಗ 74 ಸಾವಿರ ಆಗಿದೆ. ಕಾಂಗ್ರೆಸ್ಸಿನ ಭರವಸೆ ಹಾಗೂ ಬಿಜೆಪಿಯ ಬುರುಡೆ ಎನ್ನುವ ವಿಚಾರದ ಮೇಲೆ ಈ ಚುನಾವಣೆ ನಡೆಯುತ್ತಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ್, ಸಚಿವ ಹೆಚ್.ಸಿ ಮಹಾದೇವಪ್ಪ ಸೇರಿ ಇತರರಿದ್ದರು.




Leave a Reply

Your email address will not be published. Required fields are marked *

error: Content is protected !!