ರೋಣ ಮತದಾರರ ಸೆಳೆಯುತ್ತಿವೆ ಮತಗಟ್ಟೆಗಳಲ್ಲಿ ಅರಳಿದ ಚಿತ್ತಾರ

77

ಪ್ರಜಾಸ್ತ್ರ ಸುದ್ದಿ

ರೋಣ: ಲೋಕಸಭಾ ಚುನಾವಣೆ ಹಿನ್ನೆಲೆ ನೂರಕ್ಕೆ ನೂರರಷ್ಟು ಮತದಾನದ ಗುರಿಯನ್ನು ಹೊಂದಲಾಗಿದ್ದು, ಮತದಾರರನ್ನು ಸೆಳೆಯಲು ಮತಗಟ್ಟೆಗಳನ್ನು ಅಲಂಕೃತಗೊಳಿಸಲಾಗಿದೆ ಎಂದು ರೋಣ ತಾಲೂಕ ಪಂಚಾಯತ  ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಕೆ ಇನಾಮದಾರ ಹೇಳಿದ್ದಾರೆ.

ತಾಲೂಕಿನ ಕೌಜಗೇರಿ ಗ್ರಾಮದಲ್ಲಿ ಸ್ಥಾಪಿಸಿದ ಯುವ ಮತಗಟ್ಟೆಗೆ ಭೇಟಿ ನೀಡಿ, ವೀಕ್ಷಣೆ ಮಾಡಿ ಮಾತನಾಡಿದ ಅವರು ಶಾಂತಿಯುತ, ನ್ಯಾಯಸಮ್ಮತ ಮತ್ತು ಯಶಸ್ವಿಯಾಗಿ ಮತದಾನ ನಡೆಸಲು ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತದಾರರನ್ನು ಮತಗಟ್ಟೆಯತ್ತ ಆಕರ್ಷಿಸಲು ತಾಲೂಕಿನಲ್ಲಿ ಮೂರು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಯುವ ಮತಗಟ್ಟೆ, ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ವ್ಯಾಪಕವಾಗಿ ಚುನಾವಣೆಗಳನ್ನು ಸಂಘಟಿಸುವುದು ಸವಾಲಿನ ಕೆಲಸ. ಮತದಾರರನ್ನು ಮತಗಟ್ಟೆಯ ಕಡೆ ಸೆಳೆದು ಅವರಲ್ಲಿ ಜಾಗೃತಿ ಮೂಡಿಸುವ ಅದರೊಟ್ಟಿಗೆ ಮತದಾನದ ಪ್ರಮಾಣವನ್ನು ಶೇ.100 ರಷ್ಟು ಸಾಧಿಸಲು ಪಣ ತೊಡಲಾಗಿದೆ.

ಎಸ್.ಕೆ ಇನಾಮದಾರ, ರೋಣ ತಾ. ಪಂ ಇಒ

ಕೌಜಗೇರಿ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುವ ಮತಗಟ್ಟೆ ಸ್ಥಾಪಿಸಲಾಗಿದೆ. ರೋಣ ಪಟ್ಟಣದ ಎಸ್.ಆರ್ ಪಾಟೀಲ ಬಾಲಕರ ಸರಕಾರಿ ಮಾದರಿ ಶಾಲೆಯಲ್ಲಿ ವಿಶೇಷ ಕಲ್ಪನೆ ಆಧಾರಿತ (ಸಖಿ) ಮಾದರಿ ಮತಗಟ್ಟೆ ಸ್ಥಾಪಿಸಲಾಗಿದೆ. ಕುರಹಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಸಹ ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ ಎಂದರು. 

ಗೋಡೆ ಮೇಲೆ ಅರಳಿದ ಮತದಾನ ಜಾಗೃತಿ ಕಲಾಕೃತಿಗಳು

ವಿಶೇಷವಾಗಿ ನಿರ್ಮಿಸಲಾಗಿರುವ ಮತಗಟ್ಟೆಯ ಗೋಡೆಗಳ ಮೇಲೆ ಸುಂದರ ಕಲಾಕೃತಿಗಳನ್ನು ಬಿಡಿಸಲಾಗಿದೆ. ಇದು ನೋಡುಗರನ್ನು ತನ್ನ ಸೆಳೆಯುತ್ತಿದೆ. ಈ ಮೂಲಕ ಮತದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!