ಪ್ರಜಾಪ್ರಭುತ್ವ ಹಬ್ಬದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಿ: ಡಾ.ಸಜ್ಜನ

76

ಪ್ರಜಾಸ್ತ್ರ ಸುದ್ದಿ

ರೋಣ: ಭಾರತ ಪ್ರಜಾಪ್ರಭುತ್ವ ರಾಷ್ಟ್ರ, ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಮತಕ್ಕೆ ಬಹಳ ಮೌಲ್ಯವಿದೆ. ಹೀಗಾಗಿ ಪ್ರತಿಯೊಬ್ಬರು ಮತ ಚಲಾಯಿಸುವ ಮೂಲಕ ಮತದ ಮೌಲ್ಯವನ್ನು ಹೆಚ್ಚಿಸಿ ಅಂತಾ ನರಗುಂದ ವಿಧಾನ ಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಡಾ.ಹಂಪಣ್ಣ ಸಜ್ಜನ ಹೇಳಿದರು..

ರೋಣ ತಾಲೂಕಿನ ಹೊಳೆಆಲೂರ ಗ್ರಾಮದಲ್ಲಿ ಜಿಲ್ಲಾ ಸ್ವಿಪ್ ಸಮಿತಿ, ತಾಲೂಕ ಸ್ವಿಪ್ ಸಮಿತಿಯ ಸಹಯೋಗದೊಂದಿಗೆ ನರಗುಂದ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ಎಲ್ಲಾ ಗ್ರಾಮ ಪಂಚಾಯತಿ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆ ನೌಕರರ ಜೊತೆಗೂಡಿ ಬೃಹತ್ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಅವರು, ಪ್ರತಿ ಚುನಾವಣೆಯಲ್ಲಿ ಹೊಳೆ ಆಲೂರ ಗ್ರಾಮದಲ್ಲಿ ಕಡಿಮೆ ಮತದಾನ ಆಗುತ್ತಿದೆ. ಈ ಹಿನ್ನೆಲೆ ಈ ಗ್ರಾಮದಲ್ಲಿ ಬೃಹತ್ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಗೆಲ್ಲಿಸಿ. ಮತದಾನದ ದಿನ ರಜೆ ಇರುವುದರಿಂದ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದು ವಿನಂತಿಸಿದರು.

ರೋಣ ತಾಲೂಕ ಸ್ವಿಪ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಕೆ ಇನಾಮದಾರ ಮಾತಮಾಡಿ, ಉತ್ತಮ ಭಾರತಕ್ಕಾಗಿ ಮೆ.7 ರಂದು ಎಲ್ಲರೂ ತಪ್ಪದೇ ಮತದಾನ ಮಾಡಿ. ಕಳೆದ ತಾಲೂಕಿನಲ್ಲಿ ಶೇ.69ರಷ್ಟು ಮತದಾನ ಆಗಿತ್ತು. ಈ ಬಾರಿ ಶೇ.100ರಷ್ಟು ಮತದಾನದ ವಾಗ್ದಾನ ಮಾಡೋಣ ಅಂತಾ ಹೇಳಿದರು..

ನರಗುಂದ ತಹಶೀಲ್ದಾರ್ ಶ್ರೀಶೈಲ ತಳವಾರ ಮಾತಾನಾಡಿ, ಕಳೆದ ಬಾರಿ ಹೊಳೆ ಆಲೂರು ಗ್ರಾಮದಲ್ಲಿ ಶೇ.49 ಮತದಾನವಾಗಿದೆ. ಮತದಾನ ಮಾಡುವುದು ನಮ್ಮ ಹಕ್ಕು. ಮತದಾನ ಮಾಡದೇ ಯಾರ ಮೇಲೆಯೂ ಆರೋಪ ಮಾಡಬೇಡಿ. ಮತದಾನ ಮಾಡಿದ ಬಳಿಕ ಅವರನ್ನು ಕೇಳೋಕೆ ನಿಮಗೆ ಹಕ್ಕಿದೆ. ಹೀಗಾಗಿ ಮೇ.7 ರಂದು ಹೆಚ್ಚಿನ ರೀತಿಯಲ್ಲಿ ಮತದಾನ ಮಾಡಿ ಎಂದರು.

ನರಗುಂದ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ ಮಾತನಾಡಿದರು. ಮೇ.7 ರಂದು ಮತದಾನ ಮಾಡಲು  ಗುಲಾಬಿ ಹೂ ಕೊಡವ ಮೂಲಕ ಕರೆ ನೀಡಲಾಯಿತು.

ಈ ಸಂದರ್ಭದಲ್ಲಿ ರೋಣ ತಹಶೀಲ್ದಾರ್ ನಾಗರಾಜ ಹೊಳೆ, ಆಲೂರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಬಸವರಾಜ ಗಿರಿತಮ್ಮನ್ನವರ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸಂಜೀವಿನಿ ಒಕ್ಕೂಟದ ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಶಾಲಾ ಶಿಕ್ಷಕರು ಸೇರಿದಂತೆ ಅಮರಗೋಳ, ಹುನಗುಂಡಿ, ಹುಲ್ಲೂರ, ಹೊಳೆಮಣ್ಣೂರ, ಅಸೂಟಿ, ಮೆಣಸಗಿ ಗ್ರಾಮ ಪಂಚಾಯತಿ ಪಿಡಿಓ ಹಾಗೂ ಸಿಬ್ಬಂದಿ ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!