ಕೆಲವೇ ಕ್ಷಣಗಳಲ್ಲಿ ಅನರ್ಹರ ರಾಜಕೀಯ ಭವಿಷ್ಯ

362

ನವದೆಹಲಿ: ಕಾಂಗ್ರೆಸ್ ಹಾಗೂ ಜೆಡಿಎಸ್ ನ ಅನರ್ಹ ಶಾಸಕರ ತೀರ್ಪು ಇನ್ನು ಕೆಲವೇ ಕ್ಷಣಗಳಲ್ಲಿ ಹೊರ ಬೀಳಲಿದೆ. ಹೀಗಾಗಿ ನಾಯಕರ ಎದೆಯಲ್ಲಿ ಢವಢವ ಶುರುವಾಗಿದೆ. ಬೆಳಗ್ಗೆ 10.30ಕ್ಕೆ ಹೊರಬೀಳಲಿರುವ ಸುಪ್ರೀಂ ಕೋರ್ಟ್ ತೀರ್ಪುನ್ನ ಎಲ್ಲ ಪಕ್ಷಗಳು ಜಾತಕಪಕ್ಷಿಯಂತೆ ಎದುರು ನೋಡ್ತಿವೆ. ಯಾಕಂದ್ರೆ, ಈ ತೀರ್ಪು ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗೆ ಕಾರಣವಾಗಲಿದೆ.

ಈಗಾಗ್ಲೇ ಉಪ ಚುನಾವಣೆಯ ಕಾವು ಪಡೆದುಕೊಳ್ತಿದೆ. ತೀರ್ಪು ಹೊರ ಬಿದ್ದ ಮೇಲೆ, ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ನಾಯಕರ ಮುಂದಿನ ನಡೆ ಏನಾಗಿರುತ್ತೆ. ಯಾರು ಯಾರೊಂದಿಗೆ ಹೋಗ್ತಾರೆ. ಮರಳಿ ವಿಧಾನಸೌಧಕ್ಕೆ ಅವಕಾಶ ಸಿಗುತ್ತಾ? ಮನೆ ದಾರಿ ಹಿಡಿಯುವ ನಿರ್ಧಾರ ಬರುತ್ತಾ ಅನ್ನೋದು ಸ್ಪಷ್ಟವಾಗಲಿದೆ. ಇದರ ಮೇಲೆ ಬಿಜೆಪಿ ಸರ್ಕಾರದ ಭವಿಷ್ಯ ಸಹ ನಿರ್ಧಾರವಾಗಲಿದೆ.

ರಮೇಶ ಜಾರಿಕಿಹೊಳಿ, ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲ, ಬಿ.ಸಿ ಪಾಟೀಲ, ಡಾ.ಕೆ ಸುಧಾಕರ, ಎಂಟಿಬಿ ನಾಗರಾಜ, ಮುನಿರತ್ನ, ಭೈರತಿ ಬಸವರಾಜ, ಹೆಚ್.ವಿಶ್ವನಾಥ, ಆರ್.ಶಂಕರ, ಎಸ್.ಟಿ ಸೋಮಶೇಖರ, ಕೆ.ಗೋಪಾಲಯ್ಯ, ನಾರಾಯಣಗೌಡ, ಪ್ರತಾಪಗೌಡ ಪಾಟೀಲ, ಆನಂದ ಸಿಂಗ್, ಶಿವರಾಮ ಹೆಬ್ಬಾರ ಅವರ ರಾಜಕೀಯ ಭವಿಷ್ಯ ಏನಾಗುತ್ತೆ ಅನ್ನೋದು 10.30ರ ನಂತರ ಸ್ಪಷ್ಟವಾಗಲಿದೆ.




Leave a Reply

Your email address will not be published. Required fields are marked *

error: Content is protected !!