ಪ್ರಧಾನಿ, ಹಿಂದುತ್ವದ ವಿರುದ್ಧ ಪೋಸ್ಟ್: ಯುವತಿ ವಿರುದ್ಧ ಎಫ್ಐಆರ್

324

ಬೆಂಗಳೂರು: ಪ್ರಧಾನಿ ಮೋದಿ, ಹಿಂದುತ್ವ ಹಾಗೂ ಬಿಜೆಪಿ ವಿರುದ್ಧ ಅವಹೇಳನಕಾರಿ ಬರಹವನ್ನ ಸೋಷಿಯಲ್ ಮೀಡಿಯಾದಲ್ಲಿ ಬರೆದಿರುವ ಕುರಿತಂತೆ, ನಗರದ ಆನ್ ಲೈನ್ ಮೀಡಿಯಾ ಬರಹಗಾರ್ತಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಸೈಬರ್ ಅಪರಾಧ ವಿಭಾಗದ ಪೊಲೀಸ್ರು ಅಮೂಲ್ಯ ಅರಸಿನಾಮಕ್ಕಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಅಮೂಲ್ಯ ಅರಸಿನಾಮಕ್ಕಿ ಅವರು ಫೇಸ್ ಬುಕ್ ನಲ್ಲಿ ಬರೆದಿದ್ದ ಪೋಸ್ಟ್ ಗೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.

ಎಫ್ಐಆರ್ ಕಂಪ್ಲೀಟ್ ಆದ್ಮೇಲೆ ಅಮೂಲ್ಯಗೆ ನೋಟಿಸ್ ನೀಡಲಾಗುತ್ತೆ. ತನಿಖೆಗೆ ತಮ್ಮ ಮುಂದೆ ಹಾಜರಾಗುವಂತೆ ಹೇಳಲಾಗುತ್ತೆ. ಅವರು ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗವ ಬರಹದ ಕುರಿತು ಹೇಳಿಕೆಯನ್ನ ಪಡೆಯಲಾಗುತ್ತೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!