ಇವಿಎಂ ಹಾಗೂ ವಿವಿಪ್ಯಾಟ್ ಚೀಟಿ ಎಣಿಕೆ, ಅರ್ಜಿ ವಜಾ

74

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಇವಿಎಂ ಮಷಿನ್ ಗಳಿಂದ ಬಂದ ಮತಗಳನ್ನು ವಿವಿಪ್ಯಾಟ್ ಚೀಟಿಗಳೊಂದಿಗೆ ಪರಿಶೀಲಿನೆ ಮಾಡಬೇಕು ಎಂದು ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ನ್ಯಾಯಮೂರ್ತಿ ಸಂಜೀವ್ ಖನ್ನ ಹಾಗೂ ದೀಪಂಕರ್ ದತ್ತಾ ಅವರಿದ್ದ ಪೀಠ ಅಂತಿಮ ಆದೇಶ ನೀಡಿದ್ದಾರೆ. ಏಪ್ರಿಲ್ 18ರಂದು ಅರ್ಜಿಗಳ ವಿಚಾರಣೆಯನ್ನು ಅಂತಿಮಗೊಳಿಸಿದ್ದರು. ಇಂದು ತೀರ್ಪು ಪ್ರಕಟಿಸಲಾಗಿದೆ. ಇವಿಎಂ ಹಾಗೂ ವಿವಿಪ್ಯಾಟ್ ಚೀಟಿಗಳನ್ನು ತಾಳೆ ಹಾಕಬೇಕು ಎನ್ನುವುದನ್ನು ತಳ್ಳಿಹಾಕಲಾಗಿದೆ.

ಇವಿಎಂಗಳಿಗೆ ಚಿಹ್ನೆಗಳನ್ನು ಲೋಡ್ ಆದ ಬಳಿಕ 45 ದಿನದೊಳಿಗೆ ಚಿಹ್ನೆ ಲೋಡಿಂಗ್ ಘಟಕಗಳನ್ನು ಮುದ್ರೆ ಹಾಕಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.




Leave a Reply

Your email address will not be published. Required fields are marked *

error: Content is protected !!