ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ: ಸುಪ್ರೀಂಗೆ 6 ಸಾವಿರ ಮನವಿ

136

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗೆ 6 ಮನವಿಗಳು ಸಲ್ಲಿಕೆಯಾಗಿವೆ. ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ನೀಚರ ವಿರುದ್ಧ ಹೋರಾಟ ಮಾಡಿದ್ದಳು. ಆದರೆ, ಈಗ 11 ಅಪರಾಧಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಈ ಸಂಬಂಧ ದೇಶ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಅಪರಾಧಿಗಳನ್ನು ಬಿಡುಗಡೆ ಮಾಡಿದರೆ ಸಮಾಜಕ್ಕೆ ಯಾವ ಸಂದೇಶ ಹೋಗುತ್ತೆ, ಅತ್ಯಾಚಾರ ಸಂತ್ರಸ್ತೆಯರ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರುತ್ತೆ. ಹೀಗಾಗಿ ಅಪರಾಧಿಗಳ ಬಿಡುಗಡೆಯನ್ನು ರದ್ದುಗೊಳಿಸಬೇಕೆಂದು 6 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ.

ಸಾಮಾಜಿಕ ಕಾರ್ಯಕರ್ತರಾದ ಸಯೀದಾ ಹಮೀದ್‌, ಜಫರುಲ್ ಇಸ್ಲಾಂ ಖಾನ್, ರೂಪ್‌ ರೇಖಾ, ದೇವಕಿ ಜೈನ್‌, ಉಮಾ ಚಕ್ರವರ್ತಿ, ಸುಭಾಷಿಣಿ ಅಲಿ, ಕವಿತಾ ಕೃಷ್ಣನ್‌, ಮೈಮುನಾ ಮೊಲ್ಹಾ, ಹಸೀನಾ ಖಾನ್‌ ಸೇರಿದಂತೆ ಅನೇಕರು ಬಿಡುಗಡೆ ಮಾಡಿರುವ ಹೇಳಿಕೆಗೆ ಸಹಿ ಹಾಕಿದ್ದಾರೆ. ಈ ಮೂಲಕ ಅಪರಾಧಿಗಳನ್ನು ಬಿಡುಗಡೆ ಮಾಡಬಾರದು ಎಂದು ಕೇಳಿಕೊಂಡಿದ್ದಾರೆ.

ಗುಜರಾತಿನ ಲಿಮ್ ಖೇದಾ ತಾಲೂಕಿನಲ್ಲಿ ಮಾರ್ಚ್ 3, 2002ರಲ್ಲಿ ನಡೆದ 14 ಜನರ ಸಾಮೂಹಿಕ ಹತ್ಯೆಯಲ್ಲಿ ಬಿಲ್ಕಿಸ್ ಬಾನುಳ 3 ವರ್ಷದ ಮಗಳು ಸಹ ಸಾವನ್ನಪ್ಪಿದ್ದಳು. ಅಲ್ಲದೇ ಆಗ ಗರ್ಭಿಣಿಯಿದ್ದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚರ ನಡೆಸಲಾಗಿತ್ತು. ಅಲ್ಲಿಂದ ಹೋರಾಟ ಮಾಡಿಕೊಂಡು ಬಂದು ಅತ್ಯಾಚಾರಿಗಳಿಗೆ ಜೈಲು ಶಿಕ್ಷೆಯಾಗುವಂತೆ ಮಾಡಿದ್ದಳು. ಈಗ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!