Search

ಎಗ್ಸ್ ಎಂದಿರುವುದನ್ನು ಸೆಕ್ಸ್ ಎನ್ನುತ್ತಿರುವ ಕೆಲ ಮಾಧ್ಯಮಗಳು

98

ಪ್ರಜಾಸ್ತ್ರ ಸುದ್ದಿ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ನಾಯಕಿ ಮಹುವಾ ಗ್ರಾಮೀಣ ಪ್ರದೇಶದಲ್ಲಿ ಪ್ರಚಾರ ನಡೆಸಿದ್ದಾರೆ. ಈ ವೇಳೆ ವರದಿಗಾರನೊಬ್ಬ ನಿಮ್ಮ ಶಕ್ತಿಯ ಮೂಲ ಏನು ಎಂದು ಕೇಳಿದ್ದಾನೆ. ಅದಕ್ಕೆ ಅವರು ಎಗ್ಸ್ ಎಂದಿದ್ದಾರೆ. ಆದರೆ, ಬಿಜೆಪಿಯವರು ಇದನ್ನು ಸೆಕ್ಸ್ ಎಂದಿದ್ದಾರೆ ಎಂದು ಹೇಳಿ ಟೀಕಿಸುತ್ತಿದ್ದಾರೆ.

ಎಗ್ಸ್ ಎಂದಿರುವುದನ್ನು ಸೆಕ್ಸ್ ಎಂದು ಹೇಳಿ ಅಪಪ್ರಚಾರ ಮಾಡುತ್ತಿರುವವರೊಂದಿಗೆ ಕೆಲ ಮಾಧ್ಯಮಗಳು ಸೇರಿಕೊಂಡಿವೆ. ಈ ನೀಚ ಮಾಧ್ಯಮಗಳು ಸಹ ಮಹುವಾ ಸೆಕ್ಸ್ ಎಂದಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗಳು ಕೇಳಿ ಬರುತ್ತಿವೆ ಅಂತಾ ಬೊಗಳೆ ಬಿಟ್ಟಿವೆ.

ಮಹುವಾ ಹೇಳಿರುವುದನ್ನು ಕೇಳಿಸಿಕೊಳ್ಳುವ ಪ್ರತಿಯೊಬ್ಬರಿಗೂ ಅವರು ಹೇಳಿದ್ದು ಎಗ್ಸ್ ಎನ್ನುವುದು ಸ್ಪಷ್ಟವಿದೆ. ರಾಜಕೀಯದವರು ಏನಾದರೂ ಹೇಳಿಕೊಳ್ಳಲಿ. ಅದು ರಾಜಕೀಯ ಕುತಂತ್ರ. ಆದರೆ, ಕನ್ನಡ ಸೇರಿದಂತೆ ಹಲವು ಭಾಷೆಗಳ ಕೆಲ ಮಾಧ್ಯಮಗಳು ಸೆಕ್ಸ್ ಎಂದಿದ್ದಾರೆ ಅಂತಾ ಹೇಳುವ ಮೂಲಕ ತಮ್ಮ ನೀಚತನ ತೋರಿಸುತ್ತಿವೆ.




Leave a Reply

Your email address will not be published. Required fields are marked *

error: Content is protected !!