ದುಬೈನಲ್ಲಿ 2-3 ವರ್ಷಕ್ಕೆ ಆಗುವಷ್ಟು ಮಳೆ ಒಂದೇ ದಿನದಲ್ಲಿ

53

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ದುಬೈ: ಮರಭೂಮಿ ನಾಡು ದುಬೈನಲ್ಲಿ ಮಳೆಯ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ಎರಡ್ಮೂರು ವರ್ಷಕ್ಕೆ ಆಗುವಷ್ಟು ಮಳೆ ಒಂದೇ ದಿನದಲ್ಲಿ ಸುರಿದಿದ್ದು, ಅರಬ್ ರಾಷ್ಟ್ರ ಸುಸ್ತಾಗಿ ಹೋಗಿದೆ. ಇದರಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಯುಎಇ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಲ್ಲಿ ಸದಾ ಒಣಹವೆ ಇರುತ್ತದೆ. ವರ್ಷದಲ್ಲಿ ತುಂಬಾ ಕಡಿಮೆ ಮಳೆಯಾಗುತ್ತೆ. ಆದರೆ, ದುಬೈನಲ್ಲಿ ಈಗ ಸುರಿದ ಮಳೆ ಅಲ್ಲಿನ ಜನರನ್ನು ಬೆಚ್ಚಿ ಬೀಳಿಸಿದೆ. ಎಲ್ಲೆಡೆ ಪ್ರವಾಹ ಉಂಟಾಗಿದೆ.

ಇನ್ನು ಸೌದಿ ಅರೇಬಿಯಾ, ಕುವೈತ್, ಒಮಾನ್, ಜೋರ್ಡನ್, ಯೆಮನ್ ನಲ್ಲಿಯೂ ಕಳೆದೊಂದು ವಾರದಿಂದ ಮಳೆಯಾಗುತ್ತಿದೆಯಂತೆ. 1975ರ ಫೆಬ್ರವರಿ 16-17ರ ರಾತ್ರಿ ಜೋರ್ಡನ್ ಹಾಗೂ ಸೌದಿ ಅರೇಬಿಯಾ ಪೂರ್ವಭಾಗದಲ್ಲಿ 10 ಸೆ.ಮೀ ಕ್ಕಿಂತ ಹೆಚ್ಚು ಮಳೆ ಸುರಿದಿತ್ತು. 1981ರಲ್ಲಿ ಸುರಿದ ಮಳೆ ಅಧಿಕ ಪ್ರಮಾಣದಾಗಿತ್ತು. ಈಗ ಸುರಿದ ಮಳೆ ಯುಎಇ ಇತಿಹಾಸದಲ್ಲಿ ದಾಖಲೆಯಾಗಿದೆ.

ಜಾಗತಿಕ ತಾಪಮಾನ ಏರಿಕೆ, ಶೀತ ಮಾರುತಗಳು, ಏಷ್ಯಾದತ್ತ ಬೀಸುವ ಹವಾ ಮಾರುತುಗಳು ಇದಕ್ಕೆ ಕಾರಣವೆಂದು ಹವಾಮಾನ ಇಲಾಖೆ ತಜ್ಞರ ಅಭಿಪ್ರಾಯವಾಗಿದೆ.




Leave a Reply

Your email address will not be published. Required fields are marked *

error: Content is protected !!