ಒಂದೇ ಕುಟುಂಬದ 6 ಜನರ ನಿಗೂಢ ಸಾವು

466

ಪ್ರಜಾಸ್ತ್ರ ಸುದ್ದಿ

ಓಡಿಸ್ಸಾ: ಬೋಲಂಗೀರ್ ಜಿಲ್ಲೆಯ ಸಂರಪಾಡ್ ಅನ್ನೋ ಗ್ರಾಮದಲ್ಲಿ ಒಂದೇ ಕುಟುಂಬದ 6 ಜನರ ಮೃತದೇಹ ಪತ್ತೆಯಾಗಿವೆ. ಇಂದು ಬೆಳಗ್ಗೆ ಮನೆಯಿಂದ ಯಾರೂ ಬರದೆ ಇರುವ ಕಾರಣ, ನೆರೆಹೊರೆಯುವರು ಕಿಟಕಿಯಿಂದ ನೋಡಿದಾಗ ಪ್ರಕರಣ ಬಯಲಾಗಿದೆ.

ಮೃತರನ್ನ 50 ವರ್ಷದ ಬಲು ಜಾನಿ, 48 ವರ್ಷದ ಪತ್ನಿ ಜ್ಯೋತಿ, ಪುತ್ರಿಯರಾದ ಸರಿತಾ, ಶ್ರೇಯಾ, ಪುತ್ರರಾದ ಸಂಜೀವ, ಭೀಷ್ಮ ಎಂದು ಗುರುತಿಸಲಾಗಿದೆ. ಇವರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರು ಎಂದು ತಿಳಿದು ಬಂದಿದೆ. ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!