ಚಿರು ಇದ್ದಿದ್ದರೆ ಇಂದು 36ರ ಸಂಭ್ರಮ: ಮಾವನ ಭಾವುಕ ಬರಹ

279

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಇಂದು ಬದುಕಿದ್ರೆ 36ನೇ ವರ್ಷದ ಹುಟ್ಟು ಹಬ್ಬವನ್ನ ಕುಟುಂಬಸ್ಥರೊಂದಿಗೆ, ಅಭಿಮಾನಿಗಳೊಂದಿಗೆ ಆಚರಿಸಿಕೊಳ್ತಿದ್ರು. ಆದ್ರೆ, ವಿಧಿ ಅವರ ಬಾಳಿನಲ್ಲಿ ಆಟವಾಡಿತು. ಹೀಗಾಗಿ ಅವರ ಕುಟುಂಬಸ್ಥರು, ಅಭಿಮಾನಿಗಳು, ಚಿತ್ರ ತಂಡಗಳು ಸಾಂಗ್, ಪೋಸ್ಟರ್ ರಿಲೀಸ್ ಮಾಡುವ ಮೂಲಕ ಹುಟ್ಟು ಹಬ್ಬ ಆಚರಿಸಲಾಗ್ತಿದೆ.

ಇನ್ನು ಚಿರು ಬಗ್ಗೆ ಮಾವ, ಹಿರಿಯ ನಟ ಅರ್ಜುನ ಸರ್ಜಾ ಅವರು ಭಾವುಕವಾಗಿ ಬರೆದಿದ್ದಾರೆ. 36 ವರ್ಷಗಳ ಹಿಂದೆ ನೀನು ಹುಟ್ಟಿದಾಗ ಕುಣಿದಾಡಿದ್ದೆ. ಆದ್ರೆ, ವಿಧಿಯ ಕೌರ್ಯ ಹೀಗಿರುತ್ತೆ ಎಂದು ನಂಬಿರಲಿಲ್ಲ. ನನ್ನ ಕನಸಿನಲ್ಲೂ ನಿನ್ನ ಜನ್ಮ ದಿನಕ್ಕೆ ಹೀಗೆ ಬರೆಯುತ್ತೇನೆ ಎಂದುಕೊಂಡಿರ್ಲಿಲ್ಲ. ಪ್ರತಿ ಕ್ಷಣ ನಿನ್ನನ್ನು ನೆನಪು ಮಾಡಿಕೊಳ್ಳುತ್ತೇವೆ ಮಗನೆ. ಲವ್ ಯೂ ಸೋ ಮಚ್ ಬೇಬಿ ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!