‘ಪರಂಪರೆ ನಿಲ್ಲಿಸಬಾರದು ಅನ್ನೋ ಕಾರಣಕ್ಕೆ ಸರಳ ದಸರಾ’

246

ಪ್ರಜಾಸ್ತ್ರ ಸುದ್ದಿ

ಮೈಸೂರು: ನಗರದ ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವದ ಸಮಾರಂಭ ನಡೆಯಿತು. ಸಿಎಂ ಬಿ.ಎಸ್ ಯಡಿಯೂರಪ್ಪ ಪೂಜೆ ಸಲ್ಲಿಸಿದ್ರು. ಉತ್ಸವ ಮೂರ್ತಿಯನ್ನ ಅಲಂಕರಿಸಿ ಬೆಳ್ಳಿ ರಥದಲ್ಲಿ ಕೂರಿಸಲಾಯ್ತು. ಈ ವೇಳೆ ಸಿಎಂ ಪೂಜಾ ಕಂಕೈರ್ಯ ನೆರವೇರಿಸಿದ್ರು.

ವಿಜಯನಗರ ಕಾಲದಿಂದ ದಸರಾ ಹಬ್ಬ ಆಚರಿಸಿಕೊಂಡು ಬರಲಾಗ್ತಿದೆ. ಅವರ ನಂತರ ಮೈಸೂರು ಅರಸು ಮುಂದುವರೆಸಿಕೊಂಡು ಬಂದರು. ಬಳಿಕ ಸರ್ಕಾರದ ವತಿಯಿಂದ ನಡೆದುಕೊಂಡು ಬರ್ತಿದೆ. ಸಂಪ್ರದಾಯ, ಪರಂಪರೆ ನಿಲ್ಲಬಾರದು ಅನ್ನೋ ಕಾರಣಕ್ಕೆ, ಕೋವಿಡ್ ಸಂದರ್ಭದಲ್ಲಿ ಸರಳ ದಸರಾ ಆಚರಿಸಲಾಗ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ ಹೇಳಿದ್ರು.

ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನಾ ಕಾರ್ಯಕ್ರಮ. ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ನಂದಿಧ್ವಜ ಪೂಜೆ ಹಾಗೂ ಜಂಬೂಸವಾರಿ ಮಾತ್ರ ನಡೆಸಲಾಗುತ್ತೆ ಎಂದು ಹೇಳಿದ್ರು. ಇದೆ ವೇಳೆ ಕರೋನಾ ವಾರಿಯರ್ಸ್ ಗಳಿಗೆ ಸನ್ಮಾನ ಮಾಡಲಾಯ್ತು.

ಸಚಿವ ಎಸ್.ಟಿ ಸೋಮಶೇಖರ, ಶಾಸಕರಾದ ರಾಮದಾಸ, ಜಿ.ಟಿ ದೇವೇಗೌಡ, ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ, ಸಂಸದ ಪ್ರತಾಪ ಸಿಂಹ, ಡಿಸಿ ರೋಹಿಣಿ ಸಿಂಧೂರಿ, ಮೇಯರ್ ತಸ್ಲೀಂ ಸೇರಿದಂತೆ 200 ಜನಕ್ಕೆ ಮಾತ್ರ ಭಾಗವಹಿಸಲು ಅವಕಾಶ ಮಾಡಲಾಗಿತ್ತು.




Leave a Reply

Your email address will not be published. Required fields are marked *

error: Content is protected !!