ನಿವೃತ್ತ ಡಿಜಿ ಐಜಿಪಿ ಶಂಕರ್ ಬಿದರಿ ಹೆಸರಲ್ಲಿ ಸುಳ್ಳು ಪೋಸ್ಟ್

109

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ ಅವರ ಹೆಸರಲ್ಲಿ ಸುಳ್ಳು ಪೋಸ್ಟ್ ವೊಂದು ಮಾಡಲಾಗಿದೆ. 40 ಸಾವಿರ ರೂಪಾಯಿ ಹೂಡಿಕೆ ಮಾಡಿದ್ದಕ್ಕೆ ಮೂರು ಗಂಟೆಯಲ್ಲಿ 4.50 ಲಕ್ಷ ರೂಪಾಯಿ ಬಂದಿದೆ ಎಂದು ಪೋಸ್ಟ್ ಮಾಡಲಾಗಿದೆ.

ಶಂಕರ್ ಬಿದರಿ ಅವರ ಫೇಸ್ ಬುಕ್ ನಲ್ಲಿ ಈ ರೀತಿಯೊಂದು ಪೋಸ್ಟ್ ಕಾಣಿಸಿಕೊಂಡಿದೆ. ಮಾಹಿತಿ ವಿದೇಶಿ ಮಹಿಳೆಗೆ ಸಂಪರ್ಕಿಸಲು ತಿಳಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಶಂಕರ್ ಬಿದರಿ, ನನ್ನ ಅಕೌಂಟ್ ಹ್ಯಾಕ್ ಮಾಡಿ ಈ ರೀತಿ ಮಾಡಲಾಗಿದೆ. ಇದನ್ನು ಯಾರೂ ನಂಬಬಾರದು. ನಾನು ಈ ಬಗ್ಗೆ ದೂರು ಸಲ್ಲಿಸಿದ್ದೇನೆ ಅಂತಾ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!