ಅಜಯ್ ರನ್ ವೇ 34 ಚಿತ್ರದ ವಿರುದ್ಧ ಪೈಲೆಟ್ ಒಕ್ಕೂಟ ಆಕ್ರೋಶ

459

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳುವ ಮೂಲಕ ಸಾಕಷ್ಟು ಟೀಕೆಗೆ ಹಾಗೂ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಹಿಂದಿ ನಟ ಅಜಯ್ ದೇವಗನ್ ವಿರುದ್ಧ, ಭಾರತೀಯ ಪೈಲೆಟ್ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ. ಕಾರಣ ಅಜಯ್ ನಿರ್ದೇಶನ ಹಾಗೂ ನಟಿಸಿರುವ ರನ್ ವೇ 34 ಚಿತ್ರದಲ್ಲಿನ ವಿಚಾರಕ್ಕೆ.

ಕಾಕ್ ಪಿಟ್ ನಲ್ಲಿ ಧೂಮಪಾನ ಮಾಡುವುದು, ಕ್ಲಬ್ ನಲ್ಲಿ ಕುಡಿಯುವುದು ಸೇರಿದಂತೆ ಪೈಲೆಟ್ ಗಳ ಬಗ್ಗೆ ಚಿತ್ರದಲ್ಲಿ ಅವಾಸ್ತವದಿಂದ ಕೂಡಿದ ವಿಚಾರಗಳನ್ನು ತೋರಿಸಲಾಗಿದೆ. ನಮ್ಮಲ್ಲಿ 5000 ಒಕ್ಕೂಟ ಸದಸ್ಯರಿದ್ದಾರೆ. ನಿತ್ಯ ಸಾವಿರಾರು ವಿಮಾನಗಳು ಹಾರಾಟ ನಡೆಸುತ್ತವೆ. ಪ್ರಯಾಣಿಕರಿಗೆ ಭಯ ಮೂಡಿಸುವ ರೀತಿ ಚಾಲನೆ ಇರುವುದಿಲ್ಲ.

ಧೂಮಪಾನ ಹಾಗೂ ಮದ್ಯಪಾನದ ಶೂನ್ಯ ನಡುವಳಿಕೆ ಇದೆ. ಥ್ರಿಲ್ಲಿಂಗ್ ಕಥೆಯನ್ನು ಅವಾಸ್ತವದಿಂದ ತೋರಿಸಬಾರದು ಎಂದು ಒಕ್ಕೂಟ ಹೇಳಿದೆ. ಏಪ್ರಿಲ್ 29ರಂದು ಈ ಚಿತ್ರ ರಿಲೀಸ್ ಆಗಿದೆ.




Leave a Reply

Your email address will not be published. Required fields are marked *

error: Content is protected !!