ಮಕ್ಕಳಿಗೆ ಆಯುರ್ವೇದದ ತಿಳುವಳಿಕೆ

521

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪ್ರಜಾಸ್ತ್ರ ವೆಬ್ ಪತ್ರಿಕೆ ವತಿಯಿಂದ ಪಟ್ಟಣದಲ್ಲಿ ಬೇಸಿಗೆ ಕಲಾ ಮೇಳ ಆಯೋಜಿಸಿದೆ. ಮೇ 1ರಿಂದ ರಂಗ ಚಟುವಟಿಕೆಗಳು ಸೇರಿದಂತೆ ಜಾನಪದ ಕಲೆ, ನೃತ್ಯ, ಹಾಡುಗಳನ್ನು ಗುರುದೇವ ಆಶ್ರಮದಲ್ಲಿ ಕಲಿಸಿ ಕೊಡಲಾಗುತ್ತಿದೆ. ಇದರ ಜೊತೆಗ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳಿಂದ ಅರಿವು ಮೂಡಿಸಲಾಗುತ್ತಿದೆ.

ಬುಧವಾರ ಸಂಜೆ ತಾಲೂಕು ಆಯುಷ್ ಘಟಕದ ವೈದ್ಯಾಧಿಕಾರಿಯಾಗಿರುವ ಡಾ.ಮಹಾಂತೇಶ ಹಿರೇಮಠ ಅವರು, ಆಯುರ್ವೇದ ಔಷಧ ಸಸ್ಯಗಳ ಬಗ್ಗೆ ಮಾಹಿತಿ ನೀಡಿದರು. ಅಮೃತ ಬಳ್ಳಿ, ತುಳುಸಿ, ಅಲವೇರಾ ಸೇರಿದಂತೆ ಕೆಲ ಸಸ್ಯಗಳಿಂದ ಆಗುವ ಪ್ರಯೋಜನದ ಕುರಿತು ಮಕ್ಕಳಿಗೆ ತಿಳಿಸಿದರು. ಜೊತೆಗೆ ಉಚಿತವಾಗಿ ಚವನ್ ಪ್ರೆಷ್ ಡಬ್ಬಿಗಳನ್ನು ವಿತರಣೆ ಮಾಡಿದರು.

ಈ ವೇಳೆ , ಗುರುದೇವ ಆಶ್ರಮದ ಪೀಠಾಧ್ಯಕ್ಷರಾದ ಶಾಂತಗಂಗಾಧರ ಮಹಾಸ್ವಾಮಿಗಳು, ಪತ್ರಿಕೆಯ ಸಂಪಾದಕ ಹಾಗೂ ಕಲಾ ಮೇಳೆದ ಸಂಯೋಜಕ ನಾಗೇಶ ತಳವಾರ, ರಂಗಕರ್ಮಿ, ನಾಟಕದ ಮೇಷ್ಟ್ರು ಲಾಲಸಾಬ್ ಸೇರಿದಂತೆ ಪೋಷಕರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!