ಪ್ರಜಾಸ್ತ್ರ ಸಿನಿಮಾ ಡೆಸ್ಕ್
ತಮಿಳು ಸೂಪರ್ ಸ್ಟಾರ್ ರಜಿನಿಕಾಂತ, ತಮ್ಮ ಕಲ್ಯಾಣ ಮಂಟಪದ ತೆರಿಗೆಯನ್ನ ಕಡೆಗೂ ದಂಡ ಸಮೇತ ಕಟ್ಟಿದ್ದಾರೆ. ಚೆನ್ನೈನಲ್ಲಿರುವ ರಾಘವೇಂದ್ರ ಕಲ್ಯಾಣ ಮಂಟಪದ ಟ್ಯಾಕ್ಸ್ ಕಟ್ಟಿದ್ದಾರೆ.
ಆಸ್ತಿ ತೆರಿಗೆ ವಿಳಂಬ ಮಾಡಿದ್ದಕ್ಕೆ ಗ್ರೇಟರ್ ಚೆನ್ನೈ ಕಾರ್ಪೂರೇಷನ್ ನೋಟಿಸ್ ನೀಡಿತ್ತು. ತೆರಿಗೆ ಪಾವತಿ ಮಾಡುವ ಬದಲು, ಕರೋನಾ ಲಾಕ್ ಡೌನ್ ನಿಂದಾಗಿ ಆದಾಯವಿಲ್ಲ. ಹೀಗಾಗಿ ತೆರಿಗೆ ಪಾವತಿಗೆ ನಿರಾಕರಿಸಿ ಹೈಕೋರ್ಟ್ ಮೆಟ್ಟಿಲು ಹತ್ತಿದ್ರು.
ಮದ್ರಾಸ್ ಹೈಕೋರ್ಟ್ ರಜಿನಿಯನ್ನ ತರಾಟೆಗೆ ತೆಗೆದುಕೊಂಡ್ಮೇಲೆ ಅರ್ಜಿ ವಾಪಸ್ ಪಡೆಯಲಾಯ್ತು. ಇದೀಗ ದಂಡ ಸಮೇತ 6,39,846 ರೂಪಾಯಿಯನ್ನ ಹಿರಿಯ ನಟ ರಜಿನಿಕಾಂತ ಕಟ್ಟಿದ್ದಾರೆ.