ಪ್ರಜ್ವಲ್ ಪೆನ್ ಡ್ರೈವ್ ನಾನೇ ಕೊಟ್ಟಿದ್ದು: ಮಾಜಿ ಕಾರು ಚಾಲಕ ಕಾರ್ತಿಕ್

95

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಹೆಣ್ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ವಿಡಿಯೋಗಳಿಗೆ ಸಂಬಂಧಿಸಿದಂತೆ, ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಹೇಳಿಕೆಯೊಂದನ್ನು ನೀಡಿದ್ದಾರೆ.

ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಬಿಟ್ಟಿರುವ ಕಾರ್ತಿಕ್, ಸುಮಾರು 15 ವರ್ಷಗಳ ಕಾಲ ಪ್ರಜ್ವಲ್ ರೇವಣ್ಣ ಹಾಗೂ ಅವರ ಕುಟುಂಬಸ್ಥರಿಗೆ ಕಾರು ಚಾಲಕನಾಗಿ ಕೆಲಸ ಮಾಡಿದ್ದೇನೆ. ನನ್ನ ಜಮೀನು ಬರೆಸಿಕೊಂಡು, ನನ್ನ ಗರ್ಭಿಣಿ ಪತ್ನಿ ಮೇಲೆ ಹಲ್ಲೆ ಮಾಡಿ ಹಿಂಸೆ ಕೊಟ್ಟರು. ಒಂದು ವರ್ಷದ ಹಿಂದೆ ಕೆಲಸ ಬಿಟ್ಟೆ. ದೇವರಾಜೇಗೌಡ ಅವರು ದೇವೇಗೌಡರ ಕುಟುಂಬಸ್ಥರ ವಿರುದ್ಧ ಹೋರಾಟ ಮಾಡುತ್ತಿರುವುದು ತಿಳಿದು ಅವರ ಬಳಿ ಹೋದೆ.

ನನ್ನ ಬಳಿ ಇರುವ ಫೋಟೋ, ವಿಡಿಯೋ ಕೊಡು ಯಾರಿಗೂ ತೋರಿಸಲ್ಲ ಅಂದರು. ನಂಬಿ ಒಂದು ಕಾಪಿ ಕೊಟ್ಟೆ. ದೇವರಾಜೇಗೌಡ ಒಬ್ಬರಿಗೆ ಬಿಟ್ಟು ಬೇರೆ ಯಾರಿಗೂ ಕೊಟ್ಟಿಲ್ಲ. ಅವರು ಅದನ್ನು ಸ್ವಾರ್ಥಕ್ಕೆ ಬಳಸಿಕೊಂಡರೋ ಗೊತ್ತಿಲ್ಲ. ಯಾವುದೇ ಅಶ್ಲೀಲ ವಿಡಿಯೋ ರಿಲೀಸ್ ಮಾಡಬಾರದೆಂದು ನನ್ನ ವಿರುದ್ಧ ಸ್ಟೇ ತಂದಿದ್ದಾರೆ.

ಕಾಂಗ್ರೆಸ್ ನವರಿಗೆ ವಿಡಿಯೋ ಕೊಟ್ಟಿಲ್ಲ. ಅವರಿಗೆ ಕೊಡುವುದಾಗಿದ್ದರೆ ದೇವರಾಜೇಗೌಡರ ಬಳಿ ಯಾಕೆ ಹೋಗುತ್ತಿದ್ದೆ. ಪೆನ್ ಡ್ರೈವ್ ಯಾರು ಹಂಚಿದ್ದಾರೋ ಗೊತ್ತಿಲ್ಲ. ಎಸ್ಐಟಿ ಮುಂದೆ ಹಾಜರಾಗಿ ಹೇಳುತ್ತೇನೆ. ನಂತರ ಮಾಧ್ಯಮದವರ ಮುಂದೆ ಬರುತ್ತೇನೆ ಎಂದು ಕಾರ್ತಿಕ್ ಹೇಳಿದ್ದಾರೆ. ಹೀಗಾಗಿ ಸಾಕ್ಷಿ ಪುರಾವೆ ಎನ್ನುತ್ತಿದ್ದವರಿಗೆ ಕಾರ್ತಿಕ್ ಹೇಳಿಕೆ ತಲೆ ನೋವು ತಂದಿದೆ.




Leave a Reply

Your email address will not be published. Required fields are marked *

error: Content is protected !!