ಐಪಿಎಲ್ ವಾರ್ ಶುರು: ನಾಳೆ ಮುಂಬೈ-ಚನ್ನೈ ಕದನ

455

ಪ್ರಜಾಸ್ತ್ರ ಕ್ರೀಡಾ ಸುದ್ದಿ

ದುಬೈ: 2020ರ ಟಿ-20 ಐಪಿಎಲ್ ನಾಳೆಯಿಂದ ಶುರುವಾಗ್ತಿದೆ. ಕರೋನಾ ಪರಿಸ್ಥಿತಿಯಿಂದ ಮೊದಲ ಬಾರಿಗೆ ಇಂಡಿಯನ್ ಪ್ರಿಮಿಯರ್ ಲೀಗ್ ವಿದೇಶದಲ್ಲಿ ನಡೆಯುತ್ತಿದೆ. ಹೀಗಾಗಿ ಭಾರತೀಯ ಕ್ರೀಡಾಭಿಮಾನಿಗಳಿಗೆ ಒಂದಿಷ್ಟು ನಿರಾಸೆಯಾಗಿದೆ. ಆದ್ರೂ, ಐಪಿಎಲ್ ಕ್ರೇಜ್ ಕಡಿಮೆ ಆಗಿಲ್ಲ.

ಈಗಾಗ್ಲೇ ಎಲ್ಲ ತಂಡಗಳು ದುಬೈಗೆ ತೆರಳಿವೆ. ಟೂರ್ನಿಯ ಮೊದಲ ಪಂದ್ಯ ಮುಂಬೈ ಹಾಗೂ ಚನ್ನೈ ನಡುವೆ ನಡೆಯಲಿದೆ. ಎರಡು ಬಲಿಷ್ಠ ತಂಡಗಳ ನಡುವಿನ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ. ಅದು ಅಲ್ದೇ, ಕೋವಿಡ್ 19 ನಿಯಮಗಳಡಿಯಲ್ಲಿ ಮ್ಯಾಚ್ ಹೇಗೆ ನಡೆಯುತ್ತಿದೆ ಅನ್ನೋ ಕುತೂಹಲ ಹೆಚ್ಚಿದೆ.

ಶೇಕ್ ಜಾಯೀದ್ ಸ್ಟೇಡಿಯಂನಲ್ಲಿ ನಾಳೆ ಸಂಜೆ 7.30ಕ್ಕೆ ಪಂದ್ಯ ಶುರುವಾಗಲಿದೆ. ರೋಹಿತ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ಎಂ.ಎಸ್ ಧೋನಿ ನಾಯಕತ್ವದ ಚನ್ನೈ ಸೂಪರ್ ಕಿಂಗ್ಸ್ ಟೀಂ ಅಖಾಡಕ್ಕೆ ಇಳಿಯಲಿವೆ. 60 ಪಂದ್ಯಗಳ ಮೊದಲ ಪಂದ್ಯ ನಾಳೆ ನಡೆಯುತ್ತಿದೆ. ಇದ್ರಿಂದಾಗಿ ಸಹಜವಾಗಿಯೇ ಅಭಿಮಾನಿಳು ಕಾತರರಾಗಿದ್ದಾರೆ. ಈ ಬಾರಿಯ ಟೂರ್ನಿಯ ವೇಳಾ ಪಟ್ಟಿ ಇಲ್ಲಿದೆ ನೋಡಿ..




Leave a Reply

Your email address will not be published. Required fields are marked *

error: Content is protected !!