ಚಂದನವನದ ತಾರೆಯರ ಜನುಮದಿನ

277

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಸ್ಯಾಂಡಲ್ ವುಡ್ ಅಂಗಳದಲ್ಲಿ ಇಂದು ಮೂವರು ಸ್ಟಾರ್ ಗಳ ಹುಟ್ಟು ಹಬ್ಬ. ಡಾ.ವಿಷ್ಣು ಅವರ 70ನೇ ಹುಟ್ಟು ಹಬ್ಬ. ರಿಯಲ್ ಸ್ಟಾರ್ ಉಪೇಂದ್ರ ಅವರ 52ನೇ ಜನುಮ ದಿನ ಹಾಗೂ ನಟಿ ಶ್ರುತಿ ಅವರ 44ನೇ ಜನುಮ ದಿನದ ಸಂಭ್ರಮ.

ವಿಷ್ಣು ಅಭಿಮಾನಿಗಳು ಅವರ 70ನೇ ಜನುಮ ದಿನವನ್ನ ಯಜಮಾನ್ರೋತ್ಸವ ಎಂದು ಆಚರಿಸ್ತಿದ್ದಾರೆ. ಉಪೇಂದ್ರ ಅಭಿಮಾನಿಗಳು ಅವರ ಪ್ರಜಾಕೀಯದೊಂದಿಗೆ ನಲಿಯುತ್ತಿದ್ದಾರೆ. ಇತ್ತ ನಟಿ ಶ್ರುತಿಗೆ ಅವರ ಫ್ಯಾನ್ಸ್ ಶುಭಾಶಯಗಳನ್ನ ತಿಳಿಸುತ್ತಿದ್ದಾರೆ.

ನಟಿ ಶ್ರುತಿ ಒಂದು ಕಾಲದ ಸ್ಟಾರ್ ನಟಿ. ಕೌಟುಂಬಿಕ ಚಿತ್ರಗಳಲ್ಲಿ ಶ್ರುತಿ ನಟಿಸಿದ್ದಾರೆ ಅಂದರೆ ಅಲ್ಲಿ ಕಣ್ಣೀರು ಇರಲೇಬೇಕು. ಅವರು ಎಷ್ಟೇ ಮಾಡೆಲ್ ಆಗಿರುವ ಪಾತ್ರ ಮಾಡಿದ್ರೂ ಶ್ರುತಿ ಅವರನ್ನ ಇಂದಿಗೂ ಹಳ್ಳಿ ಸೊಗಡಿನ ಅಳಮುಂಜಿ ನಟಿ ಎಂದೇ ರೇಗಿಸುತ್ತಾರೆ. ಅಷ್ಟರ ಮಟ್ಟಿಗೆ ಅವರಿಗೆ ಅಂತಹ ಪಾತ್ರಗಳು ಹೆಸರು ತಂದು ಕೊಟ್ಟಿವೆ. ಈ ಮೂವರ ಜನುಮ ದಿನಕ್ಕೆ ಅವರ ಫ್ಯಾನ್ಸ್ ಶುಭ ಕೋರುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!