ಯುಐ ಚಿತ್ರದ ಟೀಸರ್ ಬಿಡುಗಡೆ

198

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನ ಹಾಗೂ ನಟನೆಯ ಯುಐ ಚಿತ್ರದ ಟೀಸರ್ ಇಂದು ಮುಂಜಾನೆ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೀಸರ್ ಬಿಡುಗಡೆಯಾಗಿದೆ.

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್, ಡಾಲಿ ಧನಂಜಯ್, ತೆಲುಗು ನಿರ್ಮಾಪಕ ಅಲ್ಲು ಅರವಿಂದ್ ಸೇರಿ ಅನೇಕರು ಭಾಗವಹಿಸಿದ್ದರು. ಕಿಚ್ಚ ಸುದೀಪ್ ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದಾರೆ.

ಟೀಸರ್ ನಲ್ಲಿ ಯಾವುದೇ ರೀತಿಯ ಡೈಲಾಗ್ ಇಲ್ಲ. ಸಿನಿಮಾ ಸಂಪೂರ್ಣವಾಗಿ ಟೆಕ್ನಿಕಲ್ ನಿಂದ ಕೂಡಿದೆ ಎನ್ನುವುದು ಟೀಸರ್ ಮೂಲಕ ತಿಳಿಯುತ್ತೆ. ಖಳನಟ ರವಿಶಂಕರ್, ಹಾಸ್ಯನಟ ಸಾಧು ಕೋಕಿಲಾ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕೊನೆಯಲ್ಲಿ ನಟ, ನಿರ್ದೇಶಕ ಉಪೇಂದ್ರ ಎಂಟ್ರಿಯಾಗುತ್ತೆ. ರೀಷ್ಮಾ ನಾಣಯ್ಯ ಉಪ್ಪಿಗೆ ಜೋಡಿಯಾಗಿದ್ದಾರೆ. ಲಹರಿ ಫಿಲ್ಮಸ್, ವೇಣು ಎಂಟರ್ ಟೈನ್ಮೆಂಟ್ ಅಡಿಯಲ್ಲಿ ಜಿ.ಮನೋಹರನ್, ಕೆಪಿ ಶ್ರೀಕಾಂತ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!