ಹೈದ್ರಾಬಾದ್ ವಿರುದ್ಧ ಚೆನ್ನೈ ಭರ್ಜರಿ ಗೆಲುವು

71

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಚೆನ್ನೈ: ಐಪಿಎಲ್ ನ 46ನೇ ಪಂದ್ಯ ಸಿಎಸ್ಕೆ ಹಾಗೂ ಎಸ್ಆರ್ ಎಚ್ ನಡುವೆ ಭಾನುವಾರ ರಾತ್ರಿ ನಡೆಯಿತು. ಹೈದ್ರಾಬಾದ್ ವಿರುದ್ಧ ಚೆನ್ನೈ ತಂಡ 78 ರನ್ ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ನಾಯಕ ಪಟ್ ಕಮಿನ್ಸ್ ಪ್ಲಾನ್ ಸಿಎಸ್ಕೆ ತಂಡದ ನಾಯಕ ಗಾಯಕ್ವಾಡ್ ಹಾಗೂ ಡೇರಿಲ್ ಮಿಚಲ್ ಉಲ್ಟಾ ಮಾಡಿದರು. ರಿತುರಾಜ್ ಗಾಯಕ್ವಾಡ್ 54 ಬೌಲ್ ಗಳಲ್ಲಿ 98 ರನ್, ಮಿಚೆಲ್ 32 ಬೌಲ್ ಗಳಲ್ಲಿ 52 ರನ್ ಬಾರಿಸಿದರು. ಶಿವಂ ದುಬೆ 20 ಬೌಲ್ ಗಳಲ್ಲಿ 39 ರನ್ ಗಳಿಸಿದರು. ಅಂತಿಮವಾಗಿ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು.

212 ರನ್ ಗಳ ಸ್ಕೋರ್ ಬೆನ್ನು ಹತ್ತಿದ್ದ ಹೈದ್ರಾಬಾದ್ ತಂಡಕ್ಕೆ ತುಷಾರ್ ದೇಶಪಾಂಡೆ ಶಾಕ್ ಕೊಟ್ಟರು. 3 ಓವರ್ ಗಳಲ್ಲಿ 27 ರನ್ ಕೊಟ್ಟು 4 ವಿಕೆಟ್ ಕಬಳಿಸಿದರು. ಹೀಗಾಗಿ ಹೆಡ್ 13, ಅಭಿಷೇಕ್ ಶರ್ಮಾ 15, ಅನ್ಮುಲ್ ಪ್ರೀತಿ ಸಿಂಗ್ 0 ರನ್ ಗೆ ವಿಕೆಟ್ ಒಪ್ಪಿಸಿದರು. ಆಡಿನ್ ಮಾರ್ಕರ್ಮ್ 32, ಹೆನ್ ರೀಚ್ 20 ರನ್ ಗಳಿಸಿದರು. ಅಂತಿಮವಾಗಿ 18.5 ಓವರ್ ಗಳಿಗೆ 134 ರನ್ ಗಳಿಗೆ ಆಲೌಟ್ ಆಯಿತು. ಮುಸ್ತಫಿಜರ್ ರೆಹಮಾನ್, ಮತೀಶ್ ಪ್ರತಿರಾಣಾ ತಲಾ 2 ವಿಕೆಟ್ ಪಡೆದರು. ಜಡೇಜಾ, ಶ್ರಾದ್ಧೂಲ್ ಠಾಕೂರ್ ತಲಾ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!