ಸೋಲಿನ ಕೊಂಡಿ ಕಳಚಿಕೊಂಡ ಹೈದ್ರಾಬಾದ್

287

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕಿಂಗ್ಸ್ ಎಲೆವನ್ ಪಂಜಾಬ್ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ನಡುವಿನ ಪಂದ್ಯದಲ್ಲಿ ಹೈದ್ರಾಬಾದ್ 9 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಸತತ ಮೂರು ಪಂದ್ಯಗಳಲ್ಲಿ ಸೋತಿದ್ದ ಡೇವಿಡ್ ವಾರ್ನರ್ ಟೀಂ ಗೆಲುವು ಸಾಧಿಸಿ ಸೋಲಿನ ಕೊಂಡಿ ಕಳಚಿಕೊಂಡಿತು.

ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಪಂಜಾಬ್ ಕ್ಯಾಪ್ಟನ್ ಕೆ.ಎಲ್ ರಾಹುಲ ಲೆಕ್ಕಾಚಾರವನ್ನ ವಾರ್ನರ್ ಟೀಂ ಉಲ್ಟಾ ಮಾಡೀತು. ಖಲೀಲ್ ಅಹ್ಮದ್ ಹಾಗೂ ಅಭಿಷೇಕ ಶರ್ಮಾ ಮಾರಕ ಬೌಲಿಂಗ್ ದಾಳಿಗೆ 19.4 ಓವರ್ ಗಳಲ್ಲಿ 10 ವಿಕೆಟ್ ಕಳೆದುಕೊಂಡು 120 ರನ್ ಗಳಿಸಿತು. ಕ್ಯಾಪ್ಟನ್ ರಾಹುಲ 4, ಮಯಾಂಕ್ ಅಗರ್ವಾಲ್ 22, ಕ್ರಿಸ್ ಗೇಲ್ 15, ಪೂರಾನ್ 0, ದೀಪಕ ಹೂಡಾ 13, ಹೆನ್ರಿಕಿಸ್ 14, ಶಾರೂಖ್ ಖಾನ್ 22, ಅಲೆನ್ 6, ಮುರಗನ್ ಅಶ್ವಿನ್ 9, ಶೆಮಿ 3 ಹಾಗೂ ಅರ್ಷದೀಪ್ ಸಿಂಗ್ 1 ರನ್ ಬಾರಿಸಿದರು.

ಹೈದ್ರಾಬಾದ್ ಪರ ಖಲೀಲ್ ಅಹ್ಮದ್ 3, ಅಭಿಷೇಕ ಶರ್ಮಾ 2, ಭುವನೇಶ್ವರ ಕುಮಾರ, ರಶೀದ್ ಖಾನ್ ಹಾಗೂ ಸಿದ್ಧಾರ್ಥ ಕೌಲ್ ತಲಾ 1 ವಿಕೆಟ್ ಪಡೆದು ಮಿಂಚಿದರು.

121 ರನ್ ಗಳ ಅಲ್ಪ ಗುರಿ ಬೆನ್ನು ಹತ್ತಿದ್ದ ಡೇವಿಡ್ ವಾರ್ನರ್ ಪಡೆ 1 ವಿಕೆಟ್ ಕಳೆದುಕೊಂಡು 18.4 ಓವರ್ ಗಳಲ್ಲಿ ಗೆಲುವು ಸಾಧಿಸಿತು. ವಾರ್ನರ್ 37 ರನ್ ಗಳಿಗೆ ಔಟ್ ಆದ್ರು. ಜಾನ್ ಬ್ರಿಸ್ಟೋ 3 ಸಿಕ್ಸ್, 3 ಫೋರ್ ಗಳೊಂದಿಗೆ 63 ಹಾಗೂ ಕೇನ್ ವಿಲಿಯಮ್ಸನ್ 16 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು. ಪಂಜಾಬ್ ಪರ ಫೆಬಿನ್ ಅಲೆನ್ 1 ವಿಕೆಟ್ ಪಡೆದ.




Leave a Reply

Your email address will not be published. Required fields are marked *

error: Content is protected !!