ಆರ್ ಸಿಬಿ ಇಂದು ಸೋತರೆ ಮುಂದೇನು?

306

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಪಿಎಲ್ 2020 ಟೂರ್ನಿಯ ಲೀಗ್ ನ ಕೊನೆಯ ಪಂದ್ಯವನ್ನ ಆರ್ ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಇಂದು ಸಂಜೆ 7.30ಕ್ಕೆ ಪಂದ್ಯ ನಡೆಯಲಿದೆ. ಕಳೆದ 3 ಪಂದ್ಯಗಳಲ್ಲಿ ಸತತವಾಗಿ ಸೋತಿರುವ ವಿರಾಟ ಕೊಹ್ಲಿ ಬಳಗಕ್ಕೆ ಇದು ತುಂಬಾ ಮಹತ್ವದ ಪಂದ್ಯವಾಗಿದೆ.

ಇತ್ತ ಡೆಲ್ಲಿ ಸಹ ಸಾಲು ಸಾಲು ಸೋಲುಗಳನ್ನ ಅನುಭವಿಸಿದೆ. ಹೀಗಾಗಿ ಶ್ರೇಯಸ್ ಅಯ್ಯರ ಬಳಗಕ್ಕೂ ಇದು ಮಹತ್ವದ ಪಂದ್ಯ. ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಬೆಂಗಳೂರು ಟೀಂ, ಇಂದು ಗೆದ್ದರೆ ಪ್ಲೇ ಆಫ್ ಸ್ಥಾನ ಭದ್ರವಾಗುತ್ತೆ.

ಇತ್ತ ಸನ್ ರೈಸರ್ಸ್ ಹೈದ್ರಾಬಾದ್ ಮುಂಬೈ ವಿರುದ್ಧದ ಪಂದ್ಯದಲ್ಲಿ ಸೋಲಬೇಕಾಗುತ್ತೆ. ಆಗ ಆರ್ ಸಿಬಿಗೆ ಸುಲಭವಾಗುತ್ತೆ. ಈಗಾಗ್ಲೇ 14 ಪಂದ್ಯ ಆಡಿರುವ ಕೆಕೆಆರ್ ಸಹ 14 ಪಾಯಿಂಟ್ ಗಳನ್ನ ಹೊಂದಿದೆ. ರನ್ ರೇಟ್ ಆಧಾರದಲ್ಲಿ ಕೆಕೆಆರ್ ಹಾಗೂ ಆರ್ ಸಿಬಿ ನಡುವೆ ಯಾರು ಇನ್ ಯಾರು ಔಟ್ ಅನ್ನೋದು ಆಗುತ್ತೆ. ಹೀಗಾಗಿ ಇಂದಿನ ಪಂದ್ಯ ಆರ್ ಸಿಬಿ ಗೆದ್ದು ಪ್ಲೇ ಆಫ್ ಸ್ಥಾನ ಭದ್ರ ಪಡಿಸಿಕೊಳ್ಳಬೇಕಿದೆ.




Leave a Reply

Your email address will not be published. Required fields are marked *

error: Content is protected !!