ಗಣಿ ‘ಕನ್ನಡಕ’ ಕಥೆ ಏನಾಯ್ತು?

343

ನಟ ಗೋಲ್ಡನ್ ಸ್ಟಾರ್ ಗಣೇಶ ಅವರ ‘ವೇರ್ ಇಸ್ ಮೈ ಕನ್ನಡಕ’ ಸಿನಿಮಾ ಶೂಟಿಂಗ್ ಇನ್ನೂ ಲೇಟ್ ಅನ್ನೋದು ತಿಳಿದು ಬಂದಿದೆ. ಕಾರಣ ಲಂಡನ್ ನಲ್ಲಿ ನಡೆಯುತ್ತಿರುವ ಕ್ರಿಕೆಟ್ ವರ್ಲ್ಡ್ ಕಪ್.

ಯೆಸ್, ವೇರ್ ಇಸ್ ಮೈ ಕನ್ನಡಕ’ ಚಿತ್ರದ ಬಹುತೇಕ ಶೂಟಿಂಗ್ ಇರೋದು ಲಂಡನ್ ನಲ್ಲಿ. ಆದ್ರೆ, ಇದೀಗ ಅಲ್ಲಿ ಕ್ರಿಕೆಟ್ ವರ್ಲ್ಡ್ ಕಪ್ ನಡೆಯುತ್ತಿರೋದು ಶೂಟಿಂಗ್ ಗೆ ತೊಂದರೆ ಅನ್ನೋ ಕಾರಣಕ್ಕೆ ಶೂಟಿಂಗ್ ಲೇಟ್ ಅಂತೆ. ಅಲ್ದೇ ಚಿತ್ರದ ಸ್ಕ್ರಿಪ್ಟ್ ನಲ್ಲಿ ಒಂದಿಷ್ಟು ಬದಲಾವಣೆಯಾಗಿದ್ದು ಈ ಬಗ್ಗೆ ನಿರ್ದೇಶಕರು ಒಂದಿಷ್ಟು ಕೆಲಸ ಮಾಡ್ತಿದ್ದಾರೆ. ಇನ್ನು ನಟ ಅರ್ಬಾಜ್ ಖಾನ್ ಇದೇ ಮೊದಲ ಬಾರಿಗೆ ಕನ್ನಡದ ಸಿನಿಮಾದಲ್ಲಿ ನಟಿಸ್ತಿದ್ದಾರೆ.

ಈ ವರ್ಷ ನಟ ಗಣೇಶ ನಟನೆಯ ತಮಿಳಿನ 96 ರಿಮೇಕ್ 99 ತೆರೆಕಂಡು ಸಕ್ಸಸ್ ಆಗಿದೆ. ಗಿಮಿಕ್ ರಿಲೀಸ್ ಗೆ ರೆಡಿಯಿದೆ. ಹೋಮ್ ಬ್ಯಾನರ್ ಚಿತ್ರ ‘ಗೀತಾ’ದ ಕೆಲಸಗಳು ನಡೆಯುತ್ತಿದ್ದು ಗಣಿ ಕನ್ನಡಕದ ಕೆಲಸಗಳು ಸ್ವಲ್ಪ ಲೇಟ್ ಆಗಲಿವೆ.


TAG


Leave a Reply

Your email address will not be published. Required fields are marked *

error: Content is protected !!