ಪ್ರಜಾಸ್ತ್ರ ಅಪರಾಧ ಸುದ್ದಿ
ಬೆಂಗಳೂರು: ಎಲ್ಲೆಡೆ ಇದೀಗ ಐಪಿಎಲ್ ಫೀವರ್ ಭರ್ಜರಿಯಾಗಿ ಶುರುವಾಗಿದೆ. ಇದರ ನಡುವೆ ಬೆಟ್ಟಿಂಗ್ ಶುರುವಾಗಿದೆ. ಹೀಗೆ ನಡೆಯುತ್ತಿದ್ದ ಬೆಟ್ಟಿಂಗ್ ಪಡೆಯ ಮೇಲೆ ಸಿಸಿಬಿ ಪಡೆ ದಾಳಿ ಮಾಡಿದೆ.
ನಗರದ ಮಲ್ಲೇಶ್ವರಂ, ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆಲವು ಅಡ್ಡೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ಮೂಲಕ 6 ಜನರು ಆರೋಪಿಗಳನ್ನ ಬಂಧಿಸಿದ್ದಾರೆ. ಈ ವೇಳೆ ಬಂಧಿತರಿಂದ 6 ಲಕ್ಷ ರೂಪಾಯಿ ವಶ ಪಡಿಸಿಕೊಳ್ಳಲಾಗಿದೆ.