ಐಪಿಎಲ್ ಬೆಟ್ಟಿಂಗ್: ಪ್ರಕರಣ ದಾಖಲು

101

ಪ್ರಜಾಸ್ತ್ರ ಸುದ್ದಿ

ದೇವರ ಹಿಪ್ಪರಗಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಪಟ್ಟಣದ ಫುಟ್ ವೇರ್ ಅಂಗಡಿಯೊಂದರ ಮೇಲೆ ಶನಿವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಪಿಎಸ್ಐ ದೀಪಾ ಗೋಡೆಕರ್ ಹಾಗೂ ಸಿಇಎನ್ ಕ್ರೈಂ ಪೊಲೀಸ್ ತಂಡದವರು ದಾಳಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.

ಐಪಿಎಲ್ ಬೆಟ್ಟಿಂಗ್ ನಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ, ಫುಟ್ ವೇರ್ ಅಂಗಡಿಯಲ್ಲಿದ್ದ ಸುಮಾರು 38,150 ರೂಪಾಯಿ ನಗದು, ಅಂದಾಜು 2000 ರೂಪಾಯಿ ಮೌಲ್ಯದ ಜಿಯೋ ಮೊಬೈಲ್ ಜಪ್ತಿ ಮಾಡಲಾಗಿದೆ. ಈ ಕುರಿತು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ 54/2024ಕಲಂ 78(6) ಕೆಪಿ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!