3,567 ಕೋಟಿ ಪಾವತಿಸಲು ಹೊಸ ನೋಟಿಸ್ ಬಂದಿದೆ: ಕಾಂಗ್ರೆಸ್

68

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಐಟಿ ಇಲಾಖೆಯಿಂದ 3,567 ಕೋಟಿ ರೂಪಾಯಿ ಪಾವತಿಸಿ ಎಂದು ಹೊಸ ನೋಟಿಸ್ ಬಂದಿದೆ ಎಂದು ಕಾಂಗ್ರೆಸ್ ಭಾನುವಾರ ತಿಳಿಸಿದೆ. ರಾಜಕೀಯ ಪಕ್ಷಗಳಿಗೆ ಇರುವ ತೆರಿಗೆ ವಿನಾಯಿತಿ ನೀಡದೆ ದಂಡ ಸಮೇತ ತೆರಿಗೆ ಪಾವತಿಸಿ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದೆ.

2014-15ನೇ ವರ್ಷದ 663 ಕೋಟಿ, 2015-16ನೇ ವರ್ಷದ 664 ಕೋಟಿ, 2016-17ನೇ ವರ್ಷದ 417 ಕೋಟಿ ರೂಪಾಯಿ ತೆರಿಗೆ ಬಾಕಿ, ಬಡ್ಡಿ ಹಾಗೂ ದಂಡಕ್ಕೆ ಸಂಬಂಧಿಸಿದಂತೆ ಹೊಸ ನೋಟಿಸ್ ನೀಡಿದೆ ಎಂದು ಕಾಂಗ್ರೆಸ್ ತಿಳಿಸಿದೆ. ಇತ್ತೀಚೆಗಷ್ಟೇ 2017-18 ಹಾಗೂ 2020-21ರ ತೆರಿಗೆ ಬಾಕಿ, ಬಡ್ಡಿ, ದಂಡಕ್ಕೆ ಸಂಬಂಧಿಸಿದಂತೆ 1,823.08 ಕೋಟಿ ಪಾವತಿಸುವಂತೆ ಸೂಚನೆ ನೀಡಿತ್ತು.

ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ವಿಪಕ್ಷಗಳು ವಾಗ್ದಾಳಿ ನಡೆಸಿದ್ದು, ತೆರಿಗೆ ಭಯೋತ್ಪಾದನೆ ನಡೆಸಿದೆ ಅಂತಾ ಕಿಡಿ ಕಾರಲಾಗಿತ್ತು. ಕಾಂಗ್ರೆಸ್ ರಾಷ್ಟ್ರೀಯ ನಾಯಕರು, ಕರ್ನಾಟಕದ ರಾಜ್ಯ ನಾಯಕರು ಕೇಂದ್ರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.




Leave a Reply

Your email address will not be published. Required fields are marked *

error: Content is protected !!