ನೀರಿಗಾಗಿ ಕೋರವಾರ ಗ್ರಾಮಸ್ಥರ ಪ್ರತಿಭಟನೆ

111

ಪ್ರಜಾಸ್ತ್ರ ಸುದ್ದಿ

ದೇವರ ಹಿಪ್ಪರಗಿ: ಕುಡಿಯುವ ನೀರಿನ ಸಲುವಾಗಿ ತಾಲೂಕಿನ ಕೋರವಾರ ಗ್ರಾಮದ 4 ಹಾಗೂ 5ನೇ ವಾರ್ಡಿನ ಜನರು, ಗ್ರಾಮ ಪಂಚಾಯ್ತಿ ಎದುರು ಸೋಮವಾರ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.

ಕುಡಿಯುವ ನೀರಿನ ಸಮಸ್ಯೆ ಕುರಿತು ಗ್ರಾಮಸ್ಥರು ಪಂಚಾಯತಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನಪ್ಪಗೌಡ ಬಿರಾದಾರ ನೇತೃತ್ವದಲ್ಲಿ ಪಂಚಾಯ್ತಿ ಎದುರು ಖಾಲಿ ಕೊಡಗಳನ್ನಿಟ್ಟು ಹೋರಾಟ ಮಾಡಿದರು.

ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಸುಮಾರು 25, ಕೊಳವೆ ಬಾವಿಗಳಿದ್ದು 3 ಬಾವಿಗಳಿದ್ದು ಅವುಗಳಲ್ಲಿ ನೀರು ಇಲ್ಲದ ಕಾರಣ ಸಾರ್ವಜನಿಕರಿಗೆ ಕುಡಿಯಲು ನೀರು ಪೂರೈಕೆಯಾಗುತ್ತಿಲ್ಲ.ಕೂಡಲೇ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಬಗೆಹಿರಿಸಬೇಕು. ಇಲ್ಲದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಚನ್ನಪ್ಪಗೌಡ ಬಿರಾದಾರ ಎಚ್ಚರಿಸಿದರು.

ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಜಿ.ವಿ ಶೆಟ್ಟಿ, ಹಾಗೂ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಪಂಚಾಯ್ತಿಯ ರಫೀಕ ಬ್ಯಾಕೋಡ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಗ್ರಾಮದ ಮುಖಂಡರಾದ ಮಾಂತಗೌಡ ಬಿರಾದಾರ, ಬಸವಲಿಂಗಪ್ಪ ಬಿರಾದಾರ, ಶಂಕರಗೌಡ ಬಿರಾದಾರ, ಸಂಗನಗೌಡ ಬಿರಾದಾರ, ಯಲ್ಲಮ್ಮ ಬಾಗೇವಾಡಿ, ಸಾಬವ್ವ ಯಳವಾರ, ಅನುಸುಬಾಯಿ ಬಿರಾದಾರ, ಸಿದ್ದವ್ವ ಯಳವಾರ, ಲಕ್ಷ್ಮೀ ಯಳವಾರ, ಸಾವಿತ್ರಿ ಯರಗಲ್, ಶಾಂತಾವಬಾಯಿ ತಳವಾರ, ಹುಸೇನಬಿ ಅಂಬಳನೂರ, ಶಾರದಾ ಬಜಂತ್ರಿ ,ರೇಣುಕಾ ಹಡಪದ ಸೇರಿ ಅನೇಕರು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!