‘ಪ್ರಥಮ ಆದ್ಯತೆಯ ಮೇರೆಗೆ ವಿಜಯಪುರ ನಗರಕ್ಕೆ ಕುಡಿಯುವ ನೀರು’

74

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಪ್ರಥಮ ಆದ್ಯತೆಯ ಮೇರೆಗೆ ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಆಸಕ್ತಿ ವಹಿಸಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು. ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು ಕುರಿತ ಸಭೆಯಲ್ಲಿ  ಮಾತನಾಡಿದ ಅವರು

ಕುಡಿಯುವ ನೀರು ಸರಬರಾಜು ಕಾರ್ಯದಲ್ಲಿ ಪೈಪ್ ಲೈನ್, ಯಂತ್ರಗಳ ಸಣ್ಣ ಪುಟ್ಟ ದುರಸ್ತಿ ಕಾರ್ಯಗಳು ಏನಾದರೂ ಇದ್ದರೆ, ತಕ್ಷಣವೇ ದುರಸ್ತಿಗೊಳಿಸಬೇಕು.  ನೀರು ಸರಬರಾಜು ಸುಗಮವಾಗಿ ಸಾಗಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು  ಕುಡಿಯುವ ನೀರು ಸರಬರಾಜು ಪ್ರಕ್ರಿಯೆಗೆ ಈ ಹಿಂದೆ ಸ್ಥಾಪಿಸಿದ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರಿಗೆ ಚುನಾವಣೆ ಕಾರ್ಯಗಳ ಜೊತೆ ಜೊತೆಗೆ ಕುಡಿಯುವ ನೀರಿನ ಸರಬರಾಜು ಕಾರ್ಯದ ಮೇಲುಸ್ತುವಾರಿ ನಿರ್ವಹಿಸಲು ನಗರ ಪಾಲಿಕೆಯ ಅಧಿಕಾರಿಗಳಿಗೆ   ತಿಳಿಸಿದರು.

ಸಾಧ್ಯವಾದಷ್ಟು 7 ದಿನಗಳಿಗಿಂತಲು ಕಡಿಮೆ ಅವಧಿಗೆ ನಗರಕ್ಕೆ ಕುಡಿಯುವ ನೀರು ಸರಬರಾಜು ಕಾರ್ಯವನ್ನು ಮಾಡಬೇಕು. ಕುಡಿಯುವ ನೀರು ಪೂರೈಕೆಯ ಕಾರ್ಯದಲ್ಲಿ ವಿದ್ಯುತ್ ಪೂರೈಕೆ ಸತತವಾಗಿ ಇರುವಂತೆ, ಹಾಗೂ ವಿದ್ಯುತ್ ಕಡಿತಗೊಳಿಸದಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ, ರಸ್ತೆ ಬದಿಯಲ್ಲಿ ಇರುವ ಮರಗಳಿಗೆ ಪಾಲಿಕೆ ವತಿಯಿಂದ ದಿನಾಲೂ ನೀರು ಉಣಿಸಿ ಬೆಳೆಸಲು ಕ್ರಮ ಕೈಗೊಳ್ಳಬೇಕು. ನಗರದಾದ್ಯಂತ ಕುಡಿಯುವ ನೀರು ಪೂರೈಸುವ ಕಾರ್ಯದ ಪ್ರತಿದಿನದ ವೇಳಾಪಟ್ಟಿಯನ್ನು ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ಮಾಹಿತಿ ಹಂಚಿಕೊಳ್ಳುವದರ ಜೊತೆಗೆ, ಪತ್ರಿಕಾ ಪ್ರಕಣೆ ಹೊರಡಿಸಲು ಕ್ರಮ ವಹಿಸಬೇಕು ಎಂದರು. ಸಭೆಯಲ್ಲಿ ವಿಜಯಪುರ ನಗರಸಭೆ ಪೌರಾಯುಕ್ತ, ಹೆಸ್ಕಾಂನ ಅಧೀಕ್ಷಕ ಅಭಿಯಂತರರು ಹಾಗೂ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಜಲಮಂಡಳಿ ಅಧಿಕಾರಿ ಸೇರಿದಂತೆ ಇತರರು ಇದ್ದರು.




Leave a Reply

Your email address will not be published. Required fields are marked *

error: Content is protected !!