ಸಿಂದಗಿ ತಹಶೀಲ್ದಾರ್ ವಿರುದ್ಧ ಈ ಗ್ರಾಮಸ್ಥರ ಆಕ್ರೋಶವೇಕೆ?

204

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕುಡಿಯುವ ನೀರಿನ ಸಲುವಾಗಿ ಕೋರವಾರ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಕೂಡಿಕೊಂಡು ಹಣ ಹಾಕಿ, ಪುರದಾಳ ಕೆರೆಯ ಹತ್ತಿರ ಬಾವಿ ಕೊರೆಸುವ ಕೆಲಸಕ್ಕೆ ಮುಂದಾಗಿದ್ದ ವೇಳೆ, ತಹಶೀಲ್ದಾರ್ ಪ್ರದೀಪಕುಮಾರ್ ಹಿರೇಮಠ ಸ್ಥಳಕ್ಕೆ ಬಂದು ಕೆಲಸ ನಿಲ್ಲಿಸಿ, ಜೆಸಿಬಿ ಕೀ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.

ತಹಶೀಲ್ದಾರ್ ನಡೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪುರದಾಳ ಗ್ರಾಮಕ್ಕೆ ಪೂರೈಕೆಯಾಗುವ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಘಟನೆಯೂ ನಡೆದಿದೆ. ತಹಶೀಲ್ದಾರ್ ಜೆಸಿಬಿ ಕೀ ವಾಪಸ್ ಕಳಿಸಿದ್ದಾರೆ. ಆದರೆ, ಅವರೆ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕು ಎಂದು ಪ್ರತಿಭಟನೆ ನೇತೃತ್ವ ವಹಿಸಿಕೊಂಡಿದ್ದ ಗ್ರಾಮದ ಮುಖಂಡರಾದ  ಬಾಪುಗೌಡ ಬಿರಾದಾರ, ಶೇಖರಗೌಡ ಬಾ, ಪೋಲಿಸ್ ಪಾಟೀಲ ಆಗ್ರಹಿಸಿದ್ದರು.

ಪುರದಾಳ ಕೆರೆಯಿಂದ ಕೋರವಾರ ಗ್ರಾಮದ 240 ಎಕರೆ ಕ್ಷೇತ್ರ ಮುಳಗಡೆಯಾಗಿದೆ. ಹೀಗಿದ್ದರೂ ಕೋರವಾರ ಗ್ರಾಮಸ್ಥರಿಗೆ ಕುಡಿಯಲು ನೀರು ಇಲ್ಲ. ಈ ಕುರಿತು ಸೂಕ್ತ ಕ್ರಮ ತೆಗೆದುಕೊಂಡು ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಿಂದಗಿ, ದೇವರ ಹಿಪ್ಪರಗಿ ಎರಡೂ ತಾಲೂಕಿಗಳ ನಡುವೆ ಇದರ ವ್ಯಾಪ್ತಿ ಬರುವುದರಿಂದ ಯಾರು ಇದರ ಸಮಸ್ಯೆ ಬಗೆಹರಿಸುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ.

ಗ್ರಾ.ಪಂ ಉಪಾಧ್ಯಕ್ಷ ಮಾದೇವ ರಾಮನಹಳ್ಳಿ, ಸದಸ್ಯರಾದ ರಾಜಶೇಖರ ಬಾ, ಛಾಯಾಗೊಳ,  ಭೀಮನಗೌಡ ಶಿ.ಕುಳೇಕುಮಟಗಿ, ಬಸನಗೌಡ ಬಿರಾದಾರ, ಶರನಗೌಡ ನಾಯ್ಕಲ್, ಶಿವನಗೌಡ ಪಾಟೀಲ, ಬಸವರಾಜ ಜಾದವ, ಮಾಂತೇಶ ಪಾಟೀಲ, ಆಶೀನ್ ವಡಗೇರಿ, ಹಣಮಂತ ದೊಡ್ಡಮನಿ, ದಯಾನಂದ ಗುತ್ತರಗಿಮಠ, ಅಯಿಬ್ ತುರಕನಗೇರಿ, ಅರವೀಂದ ರಾಠೋಡ, ಉಮೇಶ ಕಾಖಂಡಕಿ, ರಫೀಕ ಬ್ಯಾಕೋಡ, ಅಭಿವೃದ್ಧಿ ಅಧಿಕಾರಿ ಕಾಶಿನಾಥ ಕಡಕಬಾವಿ, ಸುರೇಶಗೌಡ ಪೋಲಿಸ್ ಪಾಟೀಲ, ಮಾಂತಗೌಡ ಸುಂಬಡ, ಮಲ್ಲನಗೌಡ ಆರ್.ಬಿರಾದಾರ, ರಮೇಶ ಚಾಂದಕವಟೆ, ಬಸವರಾಜ ಏವೂರ, ಗುರುರಾಜ ಹುಣಸಗಿ ಹಾಗೂ ಜಯ ಕರ್ನಾಟಕ ಸಂಘಟನೆಯ  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನಪ್ಪಗೌಡ ಬಿರಾದಾರ, ಸಿಂದಗಿ ತಾಲೂಕಾಧ್ಯಕ್ಷ ಸಂತೋಷ ಮನಗೂಳಿ, ದೇವರ ಹಿಪ್ಪರಗಿ ತಾಲುಕಾ ಉಪಾಧ್ಯಕ್ಷ ಸಿದ್ರಾಮಪ್ಪ ಅವಟಿ ಸೇರಿ ಇತರರು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!