ವಿಜಯಪುರ ವಿವಿ ಪ್ರಾಧ್ಯಾಪಕರೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ದೂರು

139

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಇಲ್ಲಿನ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಪ್ರಾಧ್ಯಾಪಕರೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಕುಲಪತಿ ಹಾಗೂ ರಿಜಿಸ್ಟರ್ ಅವರಿಗೆ ದೂರು ಸಲ್ಲಿಸಿದ್ದಾರೆ.

ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥ ಪ್ರೊ.ಮಲ್ಲಿಕಾರ್ಜುನ್ ಎನ್.ಎಲ್ ವಿರುದ್ಧ ಲೈಂಗಿಕರ ಕಿರುಕುಳ, ಅಶ್ಲೀಲವಾಗಿ ನಿಂದಿಸಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮಾತನಾಡಿರುವ ಕುಲಪತಿ ಪ್ರೊ.ಬಿ.ಕೆ ತುಳಿಸಿಮಾಲಾ, ಫೆಬ್ರವರಿ 27ರಂದು ದೂರು ಬಂದಿದೆ. ಯುಜಿಸಿ ನಿಯಮಗಳ ಪ್ರಕಾರ ಆಂತರಿಕ ದೂರು ಸಮಿತಿಗೆ ಪ್ರಕರಣ ವಹಿಸಲಾಗಿದೆ ಅಂತಾ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!