ಸಚಿನ್, ಕೊಹ್ಲಿ ದಾಖಲೆ ಪುಡಿ ಮಾಡಿದ ಜೈಸ್ವಾಲ್

188

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಧರ್ಮಶಾಲಾ: ಟೀಂ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆದ, ಸಚಿನ್, ಕೊಹ್ಲಿ ಸೇರಿ ಇತರೆ ದಿಗ್ಗಜರ ದಾಖಲೆ ಪುಡಿ ಮಾಡಿದರು.

5 ಟೆಸ್ಟ್ ಪಂದ್ಯಗಳ 8 ಇನ್ನಿಂಗ್ಸ್ ಗಳಿಂದ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ರನ್ ಕಲೆ ಹಾಕಿದ್ದು ವಿರಾಟ್ ಕೊಹ್ಲಿ(655 ರನ್) ಹೆಸರಲ್ಲಿತ್ತು. ಇಂದು 57 ರನ್ ಗಳಿಗೆ ಔಟ್ ಆಗಿರುವ ಜೈಸ್ವಾಲ್ 712 ರನ್ ಗಳೊಂದಿಗೆ ಮೊದಲ ಸ್ಥಾನಕ್ಕೆ ಬಂದರು. ಸಾವಿರ ರನ್ ಗಳಿಸಲು 9 ಟೆಸ್ಟ್ 16 ಇನ್ನಿಂಗ್ಸ್ ಪಡೆದಿದ್ದಾರೆ. ವಿನೋದ್ ಕಾಂಬ್ಳೆ 12 ಪಂದ್ಯ 14 ಇನ್ನಿಂಗ್ಸ್ ಪಡೆದಿದ್ದರು. ಚೇತೇಶ್ವರ್ ಪೂಜಾರ 11 ಪಂದ್ಯ 18 ಇನ್ನಿಂಗ್ಸ್, ಕನ್ನಡಿಗ ಮಯಾಂಕ್ ಅಗರವಾಲ್ 12 ಪಂದ್ಯ 19 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ.

9 ಪಂದ್ಯಗಳಲ್ಲೇ ಸಾವಿರ ರನ್ ಗಳಿಸಿದ ಜೈಸ್ವಾಲ್ ಕ್ರಿಕೆಟ್ ದಿಗ್ಗಜ ಡಾನ್ ಬ್ರಾಡ್ಮನ್ ಅವರ ಸಾಲಿಗೆ ಸೇರಿದರು. ಬ್ರಾಡ್ಮನ್ 7 ಪಂದ್ಯಗಳಲ್ಲಿ ಸಾವಿರ ರನ್ ಗಳಿ ಮೊದಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಸುನಿಲ್ ಗವಾಸ್ಕರ್ 1971ರಲ್ಲಿ 774 ರನ್ ಗಳಿಸಿದ್ದು ಗರಿಷ್ಠ ರನ್ ಆಗಿದೆ. ಸಧ್ಯ 712 ರನ್ ಗಳಿಸಿರುವ ಜೈಸ್ವಾಲ್ ಗೆ ಇನ್ನೊಂದು ಇನ್ನಿಂಗ್ಸ್ ನಲ್ಲಿ ಈ ದಾಖಲೆ ಮುರಿಯಲು ಸಾಧ್ಯವಿದೆ.

ಒಂದೇ ತಂಡದ ವಿರುದ್ಧ 26 ಸಿಕ್ಸ್ ಬಾರಿಸಿದ ದಾಖಲೆಯೂ ಯುವ ಆಟಗಾರನ ಪಾಲಾಯಿತು. ಸಚಿನ್ ತಂಡೂಲ್ಕರ್ ಆಸೀಸ್ ವಿರುದ್ಧ 25 ಸಿಕ್ಸ್ ಬಾರಿಸಲು 74 ಇನ್ನಿಂಗ್ಸ್ ಆಡಿದ್ದರು. ಆದರೆ, ಜೈಸ್ವಾಲ್ ಗೆ ಬರೀ 9 ಇನ್ನಿಂಗ್ಸ್ ಸಾಕಾಗಿದೆ.




Leave a Reply

Your email address will not be published. Required fields are marked *

error: Content is protected !!