ಟೆಸ್ಟ್ ಸರಣಿ ಟೀಂ ಇಂಡಿಯಾ ಕೈ ವಶ

152

ಪ್ರಜಾಸ್ತ್ರ ಕ್ರೀಡಾ ಸುದ್ದಿ

ರಾಂಚಿ: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಗಳ ಅಂತರದಿಂದ ಗೆಲ್ಲುವ ಮೂಲಕ ಟೀಂ ಇಂಡಿಯಾ 1 ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈ ವಶ ಮಾಡಿಕೊಂಡಿದೆ. ಇಂಗ್ಲೆಂಡ್ ನೀಡಿದ್ದ 192 ರನ್ ಗಳ ಗುರಿಯನ್ನು 4ನೇ ದಿನದ 2ನೇ ವಿರಾಮದೊಳಗೆ ಮುಗಿಸಿದೆ.

ನಾಯಕ ರೋಹಿತ್ ಶರ್ಮಾ 55 ರನ್ ಗಳಿಸಿ ಔಟ್ ಆದರು. ಯುವ ಆಟಗಾರ ಯಶಸ್ವಿ ಜೈಸ್ವಾಲ್ 37 ರನ್, ರಜಿತ್ ಪಟಿದಾರ್ ಶೂನ್ಯಕ್ಕೆ ಔಟ್. ಜಡೇಜಾ 4, ಸರ್ಫರಾಜ್ ಖಾನ್ ಸಹ ಶೂನ್ಯಕ್ಕೆ ಔಟ್ ಆದರು.

ಮತ್ತೊಂದು ಕಡೆ ಬ್ಯಟ್ ಬೀಸುತ್ತಿದ್ದ ಶುಭನಂ ಗಿಲ್ ಅಜೇಯ 52 ರನ್, ಧ್ರುವ್ ಜುರೆಲ್ 39 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು. ಇದರೊಂದಿಗೆ 5 ಟೆಸ್ಟ್ ಪಂದ್ಯಗಳ ಸರಣಿಯನ್ನು 3-1ರಿಂದ ಮುನ್ನಡೆ ಸಾಧಿಸಿ ಸರಣಿ ಗೆದ್ದಿದೆ. ಇಂಗ್ಲೆಂಡ್ ಪರ ಶೋಯಬ್ ಬಸೀರ್ 3 ವಿಕೆಟ್ ಪಡೆದು ಮಿಂಚಿದರು. ಜೋ ರೂಟ್ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!