ಮೂರೇ ದಿನಕ್ಕೆ ಮುಗಿದ ಪಂದ್ಯ, ಸರಣಿ ಗೆದ್ದ ಟೀಂ ಇಂಡಿಯಾ

148

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂಗ್ಲೆಂಡ್ ವಿರುದ್ಧ 5ನೇ ಪಂದ್ಯದಲ್ಲಿ ಟೀಂ ಇಂಡಿಯಾ ಅಮೋಘ ಪ್ರದರ್ಶನ ನೀಡಿದೆ. ಹೀಗಾಗಿ ಮೂರೇ ದಿನಕ್ಕೆ ಪಂದ್ಯ ಮುಗಿದಿದ್ದು ಸರಣಿಯನ್ನು 4-1 ಲೀಡ್ ನಿಂದ ಭಾರತ ಗೆದ್ದಿದೆ. 64 ರನ್ ಗಳ ಇನ್ನಿಂಗ್ಸ್ ಅಂತರದಿಂದ ಗೆಲುವು ಸಾಧಿಸಿದೆ.

ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 218 ರನ್ ಗಳಿಗೆ ಆಲೌಟ್ ಆಗಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 477 ರನ್ ಗಳಿಗೆ ಆಲೌಟ್ ಆಗಿ 259 ರನ್ ಗಳ ಮುನ್ನಡೆ ಸಾಧಿಸಿತು. ಈ ಸ್ಕೋರ್ ಚೇಸ್ ಮಾಡಿದ ಇಂಗ್ಲೆಂಡ್ 195 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲು ಅನುಭವಿಸಿತು.

ಜೋ ರೂಟ್ 89, ಬ್ರಿಸ್ಟೋ 39 ರನ್ ಬಿಟ್ರೆ ಉಳಿದವರು ಹೀಗೆ ಬಂದು ಹಾಗೇ ಹೋದರು. ಭಾರತ ಪರ ರವಿಚಂದ್ರನ್ ಅಶ್ವಿನ್ 5 ವಿಕೆಟ್ ಪಡೆದು ಮಿಂಚಿದರು. ಕುಲದೀಪ್ 2, ಬೂಮ್ರಾ 2, ಜಡೇಜಾ 1 ವಿಕೆಟ್ ಪಡೆದರು.

5 ಪಂದ್ಯ 8 ಇನ್ನಿಂಗ್ಸ್ ಗಳಿಂದ 712 ರನ್ ಗಳಿಸಿದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಪ್ಲೇಯರ್ ಆಫ್ ದಿ ಸಿರೀಸ್ ಆದರು. ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ 30 ರನ್, 2ನೇ 2 ವಿಕೆಟ್ ಪಡೆದ ಕುಲದೀಪ್ ಯಾದವ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.




Leave a Reply

Your email address will not be published. Required fields are marked *

error: Content is protected !!