ಟಾಕ್ಸಿಕ್ ಚಿತ್ರದಿಂದ ಕರೀನಾ ಹೊರ ನಡೆದಿದ್ಯಾಕೆ?

86

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಚಿತ್ರ ಬಿಡುಗಡೆಯಾಗಿ 2 ವರ್ಷ ಕಳೆದಿದೆ. ಇದುವರೆಗೂ ಯಾವ ಸಿನಿಮಾ ಬಂದಿಲ್ಲ. ಕೆಜಿಎಫ್-2 ಬಂದು ಸುಮಾರು ಒಂದೂವರೆ ವರ್ಷದ ಮೇಲೆ ಟಾಕ್ಸಿಕ್ ಸಿನಿಮಾ ಅನೌನ್ಸ್ ಆಗಿದೆ. ಅದು ರಿಲೀಸ್ ಆಗೋದು ಸಹ 2025ರಲ್ಲಿ.

ಟಾಕ್ಸಿಕ್ ಚಿತ್ರದಲ್ಲಿ ಯಶ್ ಸಹೋದರಿಯ ಪಾತ್ರದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಒಪ್ಪಿಕೊಂಡಿದ್ದರಂತೆ. ಆದರೆ, ಇದೀಗ ಚಿತ್ರದಿಂದ ಹೊರ ನಡೆದಿದ್ದಾರೆ. ಕಾರಣ ನಟಿಗೆ ಡೇಟ್ ಹೊಂದಾಣಿಕೆಯಾಗುತ್ತಿಲ್ಲವಂತೆ. ಶೂಟಿಂಗ್ ಗೆ ಸರಿಯಾಗಿ ಡೇಟ್ ಹೊಂದಾಣಿಕೆಯಾಗದ ಕಾರಣ ಟಾಕ್ಸಿಕ್ ಪ್ರಾಜೆಕ್ಟ್ ಬಿಟ್ಟು ಹೋಗಿದ್ದಾರಂತೆ.

ಕರೀನಾ ಜಾಗದಲ್ಲಿ ಸೌಥ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಬರುತ್ತಾರೆ ಎಂದು ಹೇಳಲಾಗುತ್ತಿದೆ. ನಟಿಯಾಗಿ ಉತ್ತುಂಗದ ಸ್ಥಾನದಲ್ಲಿರುವ ನಯನತಾರಾ ಇಲ್ಲಿ ಯಶ್ ಸಹೋದರಿಯಾಗಿ ಕಾಣಿಸಿಕೊಳ್ಳುತ್ತಾರ ಎನ್ನುವ ಪ್ರಶ್ನೆ ಇದೆ. ಟಾಕ್ಸಿಕ್ ಚಿತ್ರದ ನಿರ್ದೇಶಕಿ ಗೀತು ಮೋಹನದಾಸ್, ನಯನಾತಾರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಎಲ್ಲದಕ್ಕೂ ಚಿತ್ರ ತಂಡದಿಂದ ಅಧಿಕೃತಿ ಮಾಹಿತಿ ಹೊರ ಬರಬೇಕಿದೆ.




Leave a Reply

Your email address will not be published. Required fields are marked *

error: Content is protected !!